Featured StoryCovid-19

ಕೋರೊನಾ ಸೋಂಕಿನ ಮೂರನೇ ಅಲೆ ಭೀತಿ: ರಾಜ್ಯ ಆಗುತ್ತಾ ಲಾಕ್?!

ಉಡುಪಿ: ರಾಜ್ಯದಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಇದೀಗ ಸೋಂಕಿನ ಮೂರನೇ ಅಲೆಯ ಭೀತಿ ಉಂಟಾಗಿದೆ.

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಸೋಂಕು ವಿಪರೀತ ಏರಿಕೆ ಕಾಣುತ್ತಿದ್ದು ಅದು ಕರ್ನಾಟಕದ ಮೇಲೂ ನೇರ ಪರಿಣಾಮ ಬೀರಲಿದೆ. ಅಲ್ಲಿನ ನಾಗರಿಕರ ಒಡನಾಟ ನಮ್ಮ ರಾಜ್ಯದಲ್ಲಿರುವುದರಿಂದ ಸೋಂಕು ಮುಖ್ಯವಾಗಿ ದಕ್ಷಿಣ ಕನ್ನಡ , ಉಡುಪಿ ಮತ್ತು ಬೆಂಗಳೂರಿನ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗೆ ಸೋಂಕು ಹೆಚ್ಚಾದರೆ ನಿಯಂತ್ರಣಕ್ಕಾಗಿ ಮತ್ತೆ ರಾಜ್ಯ ಲಾಕ್’ಡೌನ್ ಆಗುವ ಸಾಧ್ಯತೆ ಕೂಡ ಇದೆ.

ಈಗಾಗಲೇ ಕೇರಳ, ಮಹಾರಾಷ್ಟ್ರದವರಿಗೆ ರಾಜ್ಯಕ್ಕೆ ಆಗಮಿಸಲು ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ. ಹೊರ ರಾಜ್ಯದ ಪ್ರಯಾಣಿಕರ ಮೇಲೆ ತೀವ್ರ ನಿಗಾವಹಿಸಲು ಮೆಜೆಸ್ಟಿಕ್, ಯಶವಂತಪುರ, ಕಂಟೋನ್ಮೆಂಟ್, ಕೆ.ಆರ್ ಪುರಂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಬಿಬಿಎಂಪಿಗೆ ವಿಶೇಷ ತಂಡಗಳ ರಚನೆ ಮಾಡಿ, ಕೋವಿಡ್ ಪರೀಕ್ಷೆ ನಡೆಸುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button