Featured StoryState News

ತರಕಾರಿಗಳ ಬೆಲೆ ಏರಿಕೆಗೆ “ಮಿಯಾ” ಮುಸ್ಲಿಮರು ಕಾರಣ – ಮತ್ತೆ ದ್ವೇಷಕಾರಿದ ಅಸ್ಸಾಮ್ ಮುಖ್ಯಮಂತ್ರಿ ಹೀಮಂತ್ ಬಿಸ್ವಾ ಶರ್ಮಾ!

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದಲ್ಲಿ ವಿಶೇಷವಾಗಿ ಗುವಾಹಟಿಯಲ್ಲಿ ತರಕಾರಿಗಳ ಬೆಲೆ ಏರಿಕೆಗೆ “ಮಿಯಾ ಮುಸ್ಲಿಂ” ವ್ಯಾಪಾರಿಗಳನ್ನು ದೂಷಿಸಿದ್ದಾರೆ.

ತರಕಾರಿ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಈ ಬಾರಿ ತರಕಾರಿ ಬೆಲೆಯನ್ನು ಇಷ್ಟು ಹೆಚ್ಚಿಸಿದವರು ಯಾರು, ಹೆಚ್ಚು ಬೆಲೆಗೆ ತರಕಾರಿ ಮಾರುತ್ತಿರುವ ಉದ್ಯಮಿ ಮಿಯಾ ಗಳು ಎಂದು ತಮ್ಮ ಮುಸ್ಲಿಂ ದ್ವೇಷವನ್ನು ವ್ಯಕ್ತಪಡಿಸಿದರು.

ಅಸ್ಸಾಂನಲ್ಲಿ, ‘ಮಿಯಾ’ ಪದವನ್ನು ಹೆಚ್ಚಾಗಿ ಬಂಗಾಳಿ ಮೂಲದ ಮುಸ್ಲಿಮರಿಗೆ ಬಳಸಲಾಗುತ್ತದೆ. ಇಲ್ಲಿ ಬಂಗಾಳಿ ಮೂಲದ ಮುಸ್ಲಿಮರ ದೊಡ್ಡ ಜನಸಂಖ್ಯೆಯು ತರಕಾರಿಗಳು ಮತ್ತು ಮೀನುಗಳನ್ನು ವ್ಯಾಪಾರ ಮಾಡುತ್ತದೆ.

ಇದಕ್ಕೂ ಮೊದಲು, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಧ್ಯಕ್ಷ ಮತ್ತು ಲೋಕಸಭಾ ಸಂಸದ ಬದ್ರುದ್ದೀನ್ ಅಜ್ಮಲ್ ಅವರು ‘ಮಿಯಾನ್’ ಸಮುದಾಯವಿಲ್ಲದೆ ಅಸ್ಸಾಂ ಅಪೂರ್ಣ ಎಂದು ಹೇಳಿದ್ದರು.

ಅಜ್ಮಲ್ ಅವರ ಈ ಹೇಳಿಕೆ ಕುರಿತು ಮುಖ್ಯಮಂತ್ರಿ ಶರ್ಮಾ ಅವರು, ಅಜ್ಮಲ್ ಅವರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಅಸ್ಸಾಮಿ ಸಮುದಾಯವನ್ನು ವಾಸ್ತವಿಕವಾಗಿ ಅವಮಾನಿಸಿದ್ದಾರೆ.

ಗುವಾಹಟಿಯಲ್ಲಿ ಅಸ್ಸಾಮಿಗಳಿಂದ ತರಕಾರಿಗಳಿಗೆ ಮಿಯಾ ವ್ಯಾಪಾರಿಗಳು ಹೆಚ್ಚಿನ ಬೆಲೆಯನ್ನು ವಸೂಲಿ ಮಾಡುತ್ತಿದ್ದಾರೆ.ಆದರೆ ಹಳ್ಳಿಯಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಅಸ್ಸಾಮಿ ವ್ಯಾಪಾರಿಗಳು ಇಂದು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರೆ, ಅವರು ಎಂದಿಗೂ ತಮ್ಮ ಅಸ್ಸಾಮಿ ಜನರಿಂದ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಅಸ್ಸಾಂನ ಯುವಕರು ಮುಂದೆ ಬಂದು ಈ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಕರೆ ನೀಡಿದರು.

ಫ್ಲೈಓವರ್ ಅಡಿಯಲ್ಲಿರುವ ಮಾರುಕಟ್ಟೆ ಸ್ಥಳವನ್ನು ಖುದ್ದಾಗಿ ತೆರವು ಮಾಡಿ, ಅಸ್ಸಾಮಿ ಹುಡುಗರಿಗೆ ಉದ್ಯೋಗಾವಕಾಶ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದರು. ಪ್ರಸ್ತುತ, ಗುವಾಹಟಿಯ ಮೇಲ್ಸೇತುವೆಗಳ ಅಡಿಯಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಹೆಚ್ಚಿನ ಜನರು ಮಿಯಾನ್ ಸಮುದಾಯದ ಮುಸ್ಲಿಮರು.

“ಈದ್ ಸಮಯದಲ್ಲಿ ಗುವಾಹಟಿ ನಗರದಲ್ಲಿ ಬಸ್‌ಗಳ ಸಂಚಾರವು ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಜನಸಂದಣಿಯು ಕಡಿಮೆ ಗೋಚರಿಸುತ್ತದೆ. ಏಕೆಂದರೆ ಹೆಚ್ಚಿನ ಬಸ್ ಮತ್ತು ಕ್ಯಾಬ್ ಚಾಲಕರು ಮಿಯಾನ್ ಸಮುದಾಯದಿಂದ ಬಂದವರು” ಎಂದು ಮುಖ್ಯಮಂತ್ರಿ ಹೇಳಿದರು.

ಆದರೆ, ಅಸ್ಸಾಂ ಸರ್ಕಾರವು ರಾಜ್ಯದಲ್ಲಿ ತರಕಾರಿ ಬೆಲೆಯನ್ನು ಹೆಚ್ಚಿಸಿದೆ ಎಂದು ಕಾಂಗ್ರೆಸ್‌ನ ಅಸ್ಸಾಂ ಘಟಕ ಟೀಕಿಸಿದೆ.ಕಾಂಗ್ರೆಸ್ ಮುಖಂಡ ಗೌರವ್ ಸೋಮಾನಿ ಮಾತನಾಡಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button