ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಮೃತದೇಹ ಪತ್ತೆ

ಕಳೆದ ತಿಂಗಳು ಕೆನಡಾದ ಹ್ಯಾಲಿಫ್ಯಾಕ್ಸ್ ಪ್ರದೇಶದಲ್ಲಿರುವ ವಾಲ್‌ಮಾರ್ಟ್ ಸ್ಟೋರ್‌ನ ಬೇಕರಿ ವಿಭಾಗದ ವಾಕ್-ಇನ್ ಓವನ್‌ನಲ್ಲಿ ಶವವಾಗಿ ಪತ್ತೆಯಾದ ಭಾರತೀಯ ಮೂಲದ ಯುವತಿ ಗುರ್ಸಿಮ್ರಾನ್ ಕೌರ್ ಅವರ ಸಾವಿನ ಕುರಿತು ಕೆನಡಾ ಪೊಲೀಸರು ಸೋಮವಾರ ತಮ್ಮ ತನಿಖೆಯನ್ನು ಮುಕ್ತಾಯಗೊಳಿಸಿದ್ದಾರೆ.
ಸೋಮವಾರವಷ್ಟೇ ತನಿಖೆ ಮುಕ್ತಾಯಗೊಳಿಸಿದ ಹ್ಯಾಲಿಫ್ಯಾಕ್ಸ್ ಪೊಲೀಸರು ಗುರ್ಸಿಮ್ರಾನ್ ಕೌರ್ ಸಾವು ಸಹಜ ಸಾವು ಎಂದು ಹೇಳಿಕೊಂಡಿದ್ದಾರೆ ಅಲ್ಲದೆ ತನಿಖೆ ವೇಳೆ ಕೊಲೆ ನಡೆದಿರುವ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಇದೊಂದು ಸಹಜ ಸಾವು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಗುರ್ಸಿಮ್ರಾನ್ ಕೌರ್ ಕೆಲಸ ಮಾಡುತ್ತಿದ್ದ ಇತರ ಸಹದ್ಯೋಗಿಗಳನ್ನು ವಿಚಾರಣೆ ನಡೆಸಲಾಗಿದೆ ಅಲ್ಲದೆ ಆಕೆ ಕೆಲಸ ಮಾಡುವ ಪ್ರದೇಶದ ಎಲ್ಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗಿದೆ ಆದರೆ ಯಾವುದೇ ಕೊಲೆ ನಡೆಸಿರುವ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಇದೊಂದು ಸಹಜ ಸಾವು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಇತ್ತೀಚಿಗೆ ತನ್ನ ತಾಯಿಯ ಜೊತೆಗೆ ಕೆನಡಾಕ್ಕೆ ತೆರಳಿರುವ ಗುರ್ಸಿಮ್ರಾನ್ ಕೌರ್ ಅಲ್ಲಿನ ಹ್ಯಾಲಿಫ್ಯಾಕ್ಸ್ ಪ್ರದೇಶದಲ್ಲಿರುವ ವಾಲ್‌ಮಾರ್ಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಅಲ್ಲದೆ ತನ್ನ ತಾಯಿಯ ಜೊತೆಗೆ ವಾಸವಾಗಿದ್ದರು ಆದರೆ ಕಳೆದ ತಿಂಗಳು ಅಕ್ಟೋಬರ್ 23ರಂದು ವಾಲ್‌ಮಾರ್ಟ್‌ನಲ್ಲಿರುವ ಬೇಕರಿ ವಿಭಾಗದ ವಾಕ್-ಇನ್ ಓವನ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಈ ಕುರಿತು ಪ್ರಕರಣ ದಾಖಲಾಗಿತ್ತು.