ಇರಾನ್ ವಿಮಾನ ನಿಲ್ದಾಣಕ್ಕೆ ಇಸ್ರೇಲ್ ದಾಳಿ;ಆಕಾಶದಲ್ಲೆ ಹೊಡೆದುರುಳಿಸಿದ ಇರಾನ್!

ಇಸ್ರೇಲ್‌ನಿಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ವರದಿಗಳ ನಡುವೆ ಇರಾನ್ ಇಂದು ಬೆಳಿಗ್ಗೆ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. ಇರಾನ್ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ಕ್ಷಿಪಣಿ ಉಡಾವಣೆ ಮಾಡಿದೆ ಎಂದು ಯುಎಸ್ ಅಧಿಕಾರಿಯನ್ನು ಉಲ್ಲೇಖಿಸಿ ಎಬಿಸಿ ನ್ಯೂಸ್ ವರದಿ ಮಾಡಿದೆ. ಇಸ್ಫಹಾನ್‌ನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿದ್ದರೂ, ಅವರು ಹಲವಾರು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಾರೆ ಆದರೆ “ಸದ್ಯಕ್ಕೆ ಯಾವುದೇ ಕ್ಷಿಪಣಿ ದಾಳಿ ನಡೆದಿಲ್ಲ” ಎಂದು ಇರಾನ್ ಹೇಳಿದೆ.

ಹಲವಾರು ಡ್ರೋನ್‌ಗಳನ್ನು “ದೇಶದ ವಾಯು ಪಡೆ ಯಶಸ್ವಿಯಾಗಿ ಹೊಡೆದುರುಳಿಸಿದೆ ಸದ್ಯಕ್ಕೆ ಕ್ಷಿಪಣಿ ದಾಳಿಯ ಯಾವುದೇ ವರದಿಗಳಿಲ್ಲ” ಎಂದು ಇರಾನ್‌ನ ಬಾಹ್ಯಾಕಾಶ ಸಂಸ್ಥೆಯ ವಕ್ತಾರ ಹೊಸೈನ್ ಡೇಲಿರಿಯನ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

Latest Indian news

Popular Stories