ಹೊಸದಿಲ್ಲಿ: ಮಹಾರಾಷ್ಟ್ರ ರೈಲು ಹತ್ಯೆ ಮತ್ತು ಹರಿಯಾಣ ಹಿಂಸಾಚಾರದ ಕುರಿತು ಉನ್ನತ ಮಟ್ಟದ ತನಿಖೆಗೆ ಜಮಿಯತ್ ಉಲೇಮಾ-ಎ-ಹಿಂದ್ (ಅರ್ಷದ್ ಮದನಿ ಬಣ) ಗುರುವಾರ ಕರೆ ನೀಡಿದ್ದು, ತಪ್ಪಿತಸ್ಥರನ್ನು ತಾರತಮ್ಯವಿಲ್ಲದೆ ಶಿಕ್ಷಿಸಬೇಕೆಂದು ಒತ್ತಾಯಿಸಿದೆ.
ಜಮಿಯತ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಅವರು ಚಲಿಸುವ ರೈಲಿನಲ್ಲಿ ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಕಾನ್‌ಸ್ಟೆಬಲ್‌ನಿಂದ “ಮೂವರು ಮುಗ್ಧ ಮುಸ್ಲಿಂ ಪ್ರಯಾಣಿಕರು ಮತ್ತು ಒಬ್ಬ ಪೋಲೀಸ್‌ನನ್ನು ಕ್ರೂರವಾಗಿ ಕೊಂದ” ಮತ್ತು ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ನುಹ್ ಹಿಂಸಾಚಾರವು “ಯೋಜಿತ ಪಿತೂರಿ” ಎಂದು ಮದನಿ ಆರೋಪಿಸಿದರು.
ನುಹ್‌ನಲ್ಲಿ ಏನಾಗುತ್ತಿದೆ ಎಂಬುದರ ಹಿಂದೆ ರಾಜಕೀಯ ಉದ್ದೇಶಗಳಿವೆ ಎಂದು ಅವರು ಹೇಳಿದ್ದಾರೆ.
2024 ರ ಸಂಸತ್ ಚುನಾವಣೆಯಲ್ಲಿ ಗೆಲ್ಲಲು ಧಾರ್ಮಿಕ ಉಗ್ರವಾದವನ್ನು, ದ್ವೇಷವನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.