
Featured StoryNational
ಜಮ್ಮು-ಕಾಶ್ಮೀರ: ಸೇತುವೆ ಮೇಲಿಂದ ಕಂದರಕ್ಕೆ ಬಿದ್ದ ಬಸ್, 10 ಪ್ರಯಾಣಿಕರು ಮೃತ್ಯು
ಜಮ್ಮು: ಸೇತುವೆ ಮೇಲಿಂದ ಆಳವಾದ ಕಂದರಕ್ಕೆ ಖಾಸಗಿ ಬಸ್ ಬಿದ್ದ ಪರಿಣಾಮ 10 ಪ್ರಯಾಣಿಕರು ದುರ್ಮರಣ ಹೊಂದಿರುವ ಘಟನೆ ಕೇಂದ್ರಾಡಳಿತ ಪ್ರದೇಶ ಜಮ್ಮುವಿನ ಬಳಿ ಇಂದು ಮುಂಜಾನೆ ನಡೆದಿದೆ.
ಅಮೃತಸರದಿಂದ ಕತ್ರಾಕ್ಕೆ ತೆರಳುತ್ತಿದ್ದ ಬಸ್ ಆಳವಾದ ಕಂದರಕ್ಕೆ ಬಿದ್ದು, ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಜಮ್ಮು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.




