ಧರ್ಮಸ್ಥಳದಲ್ಲಿ ಹೈಡ್ರಾಮಾ: ಸೌಜನ್ಯ ತಾಯಿಯನ್ನು ವೇದಿಕೆ ಹತ್ತಲು ಬಿಡದ ಪೊಲೀಸರು – ಧರ್ಮಸ್ಥಳದ ಹೆಸರು ಎತ್ತದೆ ನ್ಯಾಯ ಕೇಳುವುದು ಹೇಗೆ – ಕುಟುಂಬಸ್ಥರ ಆಕ್ರೋಶ

ಧರ್ಮಸ್ಥಳ: ಸೌಜನ್ಯ ಅತ್ಯಾಚಾರ ಪ್ರಕರಣ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಡಾ.ವಿರೇಂದ್ರ ಹೆಗಡೆ ಅವರ ಹೆಸರು ಕೆಡಿಸುತ್ತಿದ್ದಾರೆ ಎಂದು ಆರೋಪಿಸಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು. ಇದೀಗ ಪ್ರತಿಭಟನೆಯಲ್ಲಿ ಜಸ್ಟಿಸ್ ಫಾರ್ ಸೌಜನ್ಯ ಪೋಸ್ಟರ್ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸುತ್ತ ವೇದಿಕೆಯತ್ತ ತೆರಳಿಸ ಸೌಜನ್ಯ ತಾಯಿ ಕುಸುಮಾವತಿಯನ್ನು ಪೊಲೀಸರು ತಡೆದಿದ್ದಾರೆ.

ಈ ಕುರಿತು ಸೌಜನ್ಯ ಸಹೋದರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನ್ಯಾಯ ಕೇಳಲು ಬಂದರೆ ನನ್ನ ತಮ್ಮನಿಗೆ ಹಲ್ಲೆ ಮಾಡಲು ಮುಂದಾಗುತ್ತಾರೆ. ನ್ಯಾಯ ಕೇಳುವುದು ತಪ್ಪಾ. ಧರ್ಮಸ್ಥಳ ಗ್ರಾಮದಲ್ಲಿದ್ದು ಧರ್ಮಸ್ಥಳದ ಹೆಸರು ಎತ್ತದೆ ನ್ಯಾಯ ಕೇಳುವುದು ಹೇಗೆ ಎಂದು ಪ್ರಶ್ನಿಸಿದ ಅವರು, ನಾವು ಯಾವುದೇ ಕಾರಣಕ್ಕೂ ಶ್ರೀಕ್ಷೇತ್ರದ ಹೆಸರು ತೆಗೆದಿಲ್ಲ. ನಮ್ಮ ತಾಯಿ ಅಕ್ಕ ಸೌಜನ್ಯಳಿಗೆ ನ್ಯಾಯಕ್ಕಾಗಿ ಆಯೋಜಿಸುವ ಪ್ರತಿ ಹೋರಾಟದಲ್ಲಿ ಭಾಗಿಯಾಗಿತ್ತಾರೆ ಎಂದರು.

Latest Indian news

Popular Stories