EVM ಗಳನ್ನು ದೂಷಿಸಬಾರದು.. : ನಟ, ಎಂಎನ್ಎಂ ನಾಯಕ ಕಮಲ ಹಾಸನ್

ಚೆನ್ನೈ: “ನಾವು ಇವಿಎಂ ಅನ್ನು ದೂಷಿಸಬಾರದು, ಅಪಘಾತ ಸಂಭವಿಸಿದರೆ ಅದಕ್ಕೆ ಕಾರು ಕಾರಣವಲ್ಲ, ಚಾಲಕ ಕಾರಣವಾಗುತ್ತಾನೆ ಎಂದು ಎಂಎನ್‌ಎಂ ಮುಖ್ಯಸ್ಥ ಮತ್ತು ಪ್ರಖ್ಯಾತ ನಟ ಕಮಲ್ ಹಾಸನ್ ಭಾನುವಾರ ಹೇಳಿಕೆ ನೀಡಿದ್ದಾರೆ.

‘ಈ ಚುನಾವಣೆಯ ನಂತರ,ನಾವು EVM ಕುರಿತು ನಿರ್ಧರಿಸಬೇಕು. ಅದು ಹೇಗಿರಬೇಕು ಎಂದು ಜನರೇ ಹೇಳಬೇಕು. ಅವರ ದೇವರಾದ ರಾಮನು ಸಹ ಅಗ್ನಿಪರೀಕ್ಷೆಯನ್ನು ನಡೆಸಿದ್ದಾನೆ ಅಲ್ಲವೇ ? ಆದ್ದರಿಂದ ನಾವು ಈ ಇವಿಎಂ ಯಂತ್ರಗಳ ಶುದ್ಧತೆಯನ್ನು ಪರೀಕ್ಷಿಸುತ್ತೇವೆ. ನಾನು ಯಾರನ್ನೂ ಗೇಲಿ ಮಾಡುತ್ತಿಲ್ಲ” ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಅವರು ಡಿಎಂಕೆ ಮೈತ್ರಿಕೂಟದ ಭಾಗವಾಗಿ ಇಂಡಿಯಾ ಮೈತ್ರಿಕೂಟದ ಪರ ಪ್ರಚಾರ ನಡೆಸುತ್ತಿದ್ದಾರೆ.ಕಮಲ್ ಹಾಸನ್ ಪಕ್ಷಕ್ಕೆ ರಾಜ್ಯಸಭಾ ಸ್ಥಾನ ನೀಡಲಾಗುತ್ತಿದ್ದು, ಲೋಕಸಭೆಗೆ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಇತ್ತೀಚಿಗೆ ಭಾರತ್ ಜೋಡೋ ನ್ಯಾಯ್ ಯಾತ್ರೆ ಸಮಯದಲ್ಲಿ ರಾಹುಲ್ ಗಾಂಧಿ ಅವರು ‘ಶಕ್ತಿ’ ಹೇಳಿಕೆ ನೀಡಿ ಇವಿಎಂ ಗಳನ್ನು ದೂಷಿಸಿದ್ದರು.

Latest Indian news

Popular Stories