
ಡಿಕೆಶಿಗೆ ಅಭದ್ರತೆ ಕಾಡುತ್ತಿದೆ – ಕಾರಜೋಳ
ಬಾಗಲಕೋಟೆ : ತಮ್ಮಲ್ಲಿನ ಹುಳುಕು ಮುಚ್ಚಿಕೊಳ್ಳಲು ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ ವೃಥಾ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು
ಡಿ.ಕೆ.ಶಿವಕುಮಾರ ಅವರಿಗೆ ಅಭದ್ರತೆ ಕಾಡುತ್ತಿದೆ.. ಹೀಗಾಗಿ ಬಿಜೆಪಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಮೇಲೆ ಆರೋಪ ಮಾಡಲಿಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಸುಮ್ಮನೆ ಅವರವರಲ್ಲೇ ಕಚ್ಚಾಡಿ ನೆಲ ಕಚ್ಚುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿಗರು ಮುಂದಾಗಿದ್ದಾರೆಂಬ ಅವರ ಹೇಳಿಕೆಗೆ ಕಾರಜೋಳ ಟಾಂಗ್ ನೀಡಿದ್ದಾರೆ.
ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕೂರುವ ಪ್ರವೃತ್ತಿ ನಮ್ಮದಲ್ಲ ಎಂದ ಅವರು ಒಂದು ರಾಜಕೀಯ ಪಕ್ಷವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಅ ಕಮಲ ಅವರು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಮಹಾರಾಷ್ಟ್ರ ಮಾದರಿ ಸರ್ಕಾರ ರಚನೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ನಲ್ಲಿ ಅವರವರ ಕಚ್ಚಾಟದಿಂದ ಸರ್ಕಾರದ ಆಯುಷ್ಯ ಕಡಿಮೆಯಾಗುತ್ತಿದೆ ಎಂದರು.
ಆಪರೇಶನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಆಪರೇಶನ್ ಕಮಲ ಮಾಡುವ ಅವಶ್ಯಕತೆ ಇಲ್ಲ. ಪಕ್ಷಕ್ಕೆ ಯಾರನ್ನು ಕರೆ ತರುವ ಅವಶ್ಯಕತೆ ಇಲ್ಲ. ಅವರವರೇ ಕಚ್ಚಾಡಿ ಇಂದು ಬೀದಿಗೆ ಬಂದಿದ್ದಾರೆ. ಹಾಲು ಕುಡಿದು ಸಾಯೋವರೆಗೆ ವಿಷ ಹಾಕುವಂತಹ ಪ್ರಶ್ನೆ ಬರೋದಿಲ್ಲ ಎಂದು ತಿಳಿಸಿದರು.




