ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕೇವಲ ಐದು ದಿನ ಬಾಕಿ ಇದ್ದು ಬಹಿರಂಗ ಪ್ರಚಾರ ಮೇ 8 ಕ್ಕೆ ತೆರೆ ಬೀಳಲಿದೆ. ಇನ್ನುಳಿದ ಕೆಲವು ದಿನಗಳಲ್ಲಿ ಭರ್ಜರಿ ಪ್ರಚಾರಕ್ಕೆ ಪಕ್ಷಗಳು ಮುಂದಾಗಿದ್ದು ಸ್ಟಾರ್ ಪ್ರಚಾರಕರನ್ನು ಕಣಕ್ಕಿಳಿಸುತ್ತಿದೆ.
ಆಡಳಿತರೂಢ ಬಿಜೆಪಿ ಈ ಬಾರಿ ಜನ ವಿರೋಧಿ ಅಲೆಯನ್ನು ಪೂರಕವಾಗಿ ಬದಲಾಯಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಮತ್ತು ಯೋಗಿ ಆದಿತ್ಯನಾಥರನ್ನು ಬಳಸಿಕೊಂಡು ಜನಮತ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ.
ಕಾಂಗ್ರೆಸ್ ಕೂಡ ತನ್ನ ಪಕ್ಷದ ರಾಷ್ಟ್ರೀಯ ನಾಯಕರಾದ ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರಿಂದ ಮತ ಬೇಟೆ ನಡೆಸುತ್ತಿದೆ. ಇದರ ಮಧ್ಯೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೂಡ ಜನಾಕರ್ಷಕ ನಾಯಕರಾಗಿ ಮತ ಬೇಟೆ ನಡೆಸಲಾಗುತ್ತಿದೆ. ಈತನ್ಮಧ್ಯೆ ತಮ್ಮ ಅದೃಷ್ಟ ಪರೀಕ್ಷೆ ನಡೆಸಲು ಜೆ.ಡಿಎಸ್ ಕುಮಾರ ಸ್ವಾಮಿ, ದೇವೆಗೌಡರ ನೇತೃತ್ವದಲ್ಲಿ ಅತೀ ಹೆಚ್ಚು ಕ್ಷೇತ್ರದಲ್ಲಿ ಜಯ ಸಾಧಿಸಲು ಪ್ರಯತ್ನಿಸುತ್ತಿದೆ. ಇನ್ನುಳಿದಂತೆ ಆಪ್,ಕೆ.ಆರ್.ಎಸ್,ಎಡ ಪಕ್ಷಗಳು,ಬಿಎಸ್ಪಿ, ಎಸ್.ಡಿ.ಪಿ.ಐ ಕೂಡ ಜಯ ಸಾಧಿಸಲು ಹೆಣಗಾಡುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಮುನ್ನಡೆ ಸಾಧಿಸಿದ್ದು ಬಿಜೆಪಿ ಮೋದಿ, ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ಮಟ್ಟದ ನಾಯಕರನ್ನು ಬಳಸಿಕೊಂಡರು ಜನಮತ ರೂಪಿಸುವಲ್ಲಿ ಸೋಲುತ್ತಿದ್ದಾರೆ. ಒಟ್ಟಿನಲ್ಲಿ ಮೇ 10 ರಂದು ನಡೆಯುವ ಮತದಾನದಲ್ಲಿ ಜನ ಯಾರತ್ತ ಒಲುವು ಹೊಂದಿದ್ದಾರೆ ಎಂಬುವುದು ಅರ್ಥವಾಗುತ್ತದೆ. ಮೇ 13 ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.