ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ಭಾಗಮಂಡಲದ ಚುನಾವಣಾ ಫಲಿತಾಂಶ ಪ್ರಕಟ

ಹೊಸೂರು ಸತೀಶ್ ನೇತೃತ್ವದ ತಂಡ ಮತ್ತೆ ಗೆಲುವಿನ ಸಿಹಿ ಕಂಡಿದೆ.

2023 ರಿಂದ 2028 ರವರೆಗಿನ ಆಡಳಿತ ಮಂಡಳಿಯ ಚುನಾವಣೆ.

ತೀವ್ರ ಕುತೂಹಲ ಮೂಡಿಸಿದ್ದ ಈ ಬಾರಿಯ ಚುನಾವಣೆ.

ಹಾಲಿ ಆಡಳಿತ ಮಂಡಳಿಯ ಮೇಲೆ ಹಗರಣಗಳ ಆರೋಪ ಹೊರಿಸಲಾಗಿತ್ತು.

ಆದರೆ ಅದನ್ನು ಸಾಬೀತು ಮಾಡಲು ದೂರುದಾರರು ವಿಫಲ.

ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ನಿಯಮಿತ ಭಾಗಮಂಡಲದ ನೂತನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸೋಮವಾರಪೇಟೆ ವಿಭಾಗದಿಂದ ಸಾಮಾನ್ಯ ಕ್ಷೇತ್ರದಿಂದ ಹರಗ ದಿನೇಶ್, ಕೆ ಕೆ ಗೋಪಾಲ .ಮಾಹಿಳಾ ಮಿಸಲು ಕ್ಷೇತ್ರದಿಂದ ಕೆ‌. ಕೆ ಸೌಮ್ಯ ಅವಿರೋದವಾಗಿ ಆಯ್ಕೆಯಾಗಿದ್ದು ಸೋಮವಾರಪೇಟೆಯಿಂದ ಸರ್ದಿಸಿದ ಹಿಂದುಳಿದ ವರ್ಗದಿಂದ ಬೋಪಣ್ಣ 82ಮತಗಳಿಸಿದರು . ಪ್ರತಿಸ್ಪರ್ಧಿ ಉದಯಕುಮಾರ್ 46 ಮತಗಳಿಸಿ ಸೋಲು ಅನುಭವಿಸಿದರು .

ಸತೀಶ್ ಕುಮರ್ ನೇತೃತ್ವದ ಬಿಜೆಪಿ ಬೆಂಬಲಿತರಾಗಿ ಪರಿಶಿಷ್ಟ ಜಾತಿಯಿಂದ ಜಯಂತ್ ತಲಕಾವೇರಿ ಅವಿರೋಧವಾಗಿ ಆಯ್ಕೆಯಾಗಿದ್ದು,ಉಳಿದಂತೆ ಹಿಂದುಳಿದ ವರ್ಗದ
ಕ್ಷೇತ್ರ ದಿಂದ ಅಯ್ಯಣಿರ ಎಂ.ದಿನೇಶ್ ಸ್ಪರ್ದಿಸಿದ್ದು 527 ಗಳಿಸಿ ಆಯ್ಕೆಯಾಗಿದ್ದರೆ ಪ್ರತಿಸ್ಪರ್ಧಿ ಬಿಲ್ಲವರ ಬೈರಪ್ಪ 163 ಮತ ಗಳಿಸಿ ಸೋಲನ್ನು ಅನುಭವಿಸಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್. ಎನ್.ಕುಸುಮ ಶಿರಕಜೆ 417 ಮತಗಳಿಸಿದರೆ ಪ್ರತಿಸ್ಪರ್ದಿ ಅಮೆ ಜಿ.ಸರೋಜಾ 178 ಮತಗಳಿಸಿ ಸೋಲನ್ನು ಅನುಭವಿಸಿದ್ದಾರೆ.
ಕೊಡಗು ಜಿಲ್ಲಾ ಪ್ರಗತಿಪರ ಜೇನು ಕೃಷಿಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸುಮಾರು 40 ಮಂದಿ ಸದಸ್ಯರನ್ನು ಮತಪಟ್ಟಿಯಿಂದ ಕೈ ಬಿಟ್ಟಿದ್ದು ಅವರಿಗೆ ಮತದಾನದ ಅವಕಾಶ ನೀಡುವಂತೆ ಒಂದು ಬಣ ಕೋರಿತ್ತು. ಮತದಾನದ ಹಕ್ಕು ಕಸಿದಿರುವುದು ಸರಿಯಲ್ಲ ಎಂದಿರುವ ಹೈಕೋರ್ಟ್ ಮತದಾನದಿಂದ ವಂಚಿತರಾದವರಿಗೆ ಮತದಾನದ ಅವಕಾಶ ಕಲ್ಪಿಸಿತ್ತು

. ಮತದಾನದಿಂದ ವಂಚಿತರಾದ 66 ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದರು.

ಪ್ರತಿಷ್ಠೆಯ ಕಣವಾಗಿದ್ದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ನಡೆದ ಸಾಮಾನ್ಯ ವರ್ಗದ ನಿರ್ದೇಶಕ ರ ಎರಡನೇ ಹಂತದ ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ರಾಗಿ ಹೊಸೂರು ಸತೀಶ್ ಕುಮಾರ್ ನೇತೃತ್ವದಲ್ಲಿ ಸ್ಪರ್ಧಿಸಿ ದ ಸತೀಶ್ ಕುಮಾರ್ (457)ಕುದುಕುಳಿ ಅಶ್ವತ್402 ಮತ ಪಡೆದರು.
,ದೇವಂಗೋಡಿ ಬಾಸ್ಕರ 370..ಮತ,ಕೆದಾಂಬಾಡಿ ಯು.ಮೋಹನ360..ಮತ,ಪಾಣತ್ತಲೆ ಎ.ಲೋಕನಾಥ್.411., ಶಿರಕಜೆ.ಎಂ.ಲೋಕ ಪ್ರಕಾಶ419,ಪೊಡನೋಳನ ಸಿ.ವಿಠಲ374,ಮತಗಳನ್ನು ಪಡೆದು ಪ್ರತಿಸ್ಪರ್ಧಿ ಗಳಾದ ಕೋಡಿ ಮೋಟಯ್ಯ215,ಕೆದಾಂಬಾಡಿ ಚೇತನ್136, ಬಾರಿಕೆ ನಿರಂಜನ್126,ಅಮೆ ಮಾದಪ್ಪ158,ಕೆದಾಂಬಾಡಿ ಟಿ.ರಮೇಶ್185, ಚೆದುಕಾರು ರವಿ150,ದೇವಂಗೋಡಿ ವೇಗೆಂದ್ರ123 ರವರನ್ನು ಪರಾಭವ ಗೊಳಿಸಿದರು..

ಹೊಸೂರು ಸತೀಶ್ ನೇತೃತ್ವದ ತಂಡ ಮತ್ತೆ ಗೆಲುವಿನ ಸಿಹಿ ಕಂಡಿದೆ.

*

Latest Indian news

Popular Stories