
ಕೊಡಗು: ವಿದ್ಯುತ್ ಪ್ರಸರಿಸಿ ಲೈನ್ ಮೆನ್ ಮೃತ್ಯು
ಆರ್ಜಿ ಗ್ರಾಮದ ಚರ್ಚ್ ಸಮೀಪ 11 ಕೆ ವಿ ವಿದ್ಯುತ್ ತಂತಿ ದುರಸ್ತಿಪಡಿಸುತ್ತಿರುವ ಸಂದರ್ಭ ಒಂದು ಭಾಗದಲ್ಲಿ ತಂತಿ ತುಂಡಾಗಿ ಭೂಮಿಗೆ ವಿದ್ಯುತ್ ಪ್ರಹರಿಸಿ ಅಲ್ಲೇ ಇದ್ದ ಲೈನ್ ಮ್ಯಾನ್ ಅನಿಲ್ ಮ್ಯಾನೇಜಿಸ್ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
45 ವರ್ಷ ಪ್ರಾಯದ ಅನಿಲ್ ಕಳೆದ 20 ವರ್ಷಗಳಿಂದ ವಿರಾಜಪೇಟೆ ವಲಯದಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೆಗ್ಗಳ ವಿಭಾಗಕ್ಕೆ ಸೇರಿದ ಆರ್ಜಿ ಗ್ರಾಮದಲ್ಲಿ ವಿದ್ಯುತ್ ಆಡಚಣೆ ಉಂಟಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ದುರಸ್ತಿ ಪಡಿಸಲು ವಿದ್ಯುತ್ ನಿಲುಗಡೆಗೊಳಿಸಿ ಇನ್ನಿತರ ಭಾಗಕ್ಕೆ 11 ಕೆ ವಿ ವಿದ್ಯುತ್ ಸರಬರಾಜಾಗಲು ಲೈನ್ ಚಾರ್ಜ್ ಮಾಡುವ ಸಂದರ್ಭ ಇನ್ನೊಂದು ಭಾಗದ 11 ಕೆ ವಿ ತಂತಿ ತುಂಡಾಗಿ ನೆಲಕ್ಕೆ ಬಿದ್ದಾಗ ವಿದ್ಯುತ್ ಗ್ರೌಂಡಿಂಗ್ ಆಗಿ ಸುನಿಲ್ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಸುರೇಶ್ ಪಿ. ಎಸ್, ಅಸಿಸ್ಟೆಂಟ್ ಇಂಜಿನಿಯರ್ ಟೆಕ್ನಿಕಲ್ ಸೋಮೇಶ್, ಸಹಾಯಕ ಇಂಜಿನಿಯರ್ ಅಯ್ಯನ ಗೌಡ ಪಾಟೀಲ್ ಭೇಟಿ ನೀಡಿ ದುರಂತದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ವಿರಾಜ್ಪೇಟೆ ಪೊಲೀಸ್ ರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.




