ಉಡುಪಿ: ಭಾರೀ ಮಳೆ ಸುರಿಯುತ್ತಿದ್ದು ಇದೀಗ ಹಲವು ಮನೆಗಳಲ್ಲಿ ನೀರು ನುಗ್ಗಿದೆ. ಇದೀಗ ಉಡುಪಿಯ ಕೊಡಂಕೂರು ಪ್ರದೇಶದಲ್ಲಿ ನೆರೆ ವಿಪರೀತ ಹೆಚ್ಚಾಗಿದ್ದು ಜನರನ್ನು ಸ್ಥಳಾಂತರ ಮಾಡಲಾಗಿದೆ.
ಕೊಡಂಕೂರು ಭಾಗದಲ್ಲಿ ಮಕ್ಕಳು,ಮಹಿಳೆಯರನ್ನು ಅಗ್ನಿ ಶಾಮಕದಳದಿಂದ ರಕ್ಷಿಸಿ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೊಡಂಕೂರು ಪ್ರದೇಶದಲ್ಲಿ ಹಲವು ಮನೆಗಳು ಜಲಾವೃತವಾಗಿದೆ. ಪೆರಂಪಳ್ಳಿ,ನಿಟ್ಟೂರು,ಪುತ್ತೂರು ಪ್ರದೇಶದಲ್ಲೂ ನೆರೆ ಕಾಣಿಸಿಕೊಂಡಿದೆ.
