ಕೊಲ್ಲಂನಿಂದ ಕಿಡ್ನಾಪ್ ಗೊಂಡ 6 ವರ್ಷದ ಬಾಲಕಿ ಪತ್ತೆ

ಕೊಲ್ಲಂ, ನ 28 : ಕೇರಳದ ಕೊಲ್ಲಂನಿಂದ ಅಪಹರಣಗೊಂಡಿದ್ದ ಆರು ವರ್ಷದ ಬಾಲಕಿ ಅಬಿಗೈಲ್ ಸಾರಾ ರೆಜಿ ಪತ್ತೆ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. ಅಪಹರಣಕಾರರು ಕೊಲ್ಲಂ ಆಶ್ರಮದ ಮೈದಾನದಲ್ಲಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಬಾಲಕಿಯನ್ನು ಪೊಲೀಸರು ಸದ್ಯ ನಗರ ಪೊಲೀಸ್ ಆಯುಕ್ತರ ಕೇಂದ್ರ ಕಚೇರಿಗೆ ಸ್ಥಳಾಂತರಿಸಿದ್ದಾರೆ.

ತನ್ನ ಸಹೋದರನೊಂದಿಗೆ ಟ್ಯೂಷನ್ ತರಗತಿಗೆ ಹೋಗುತ್ತಿದ್ದಆರು ವರ್ಷದ ಬಾಲಕಿಯನ್ನು ಕಾರಿನಲ್ಲಿ ಬಂದ ಮಹಿಳೆ ಸಮೇತವಿದ್ದ ತಂಡವೊಂದು ಸೋಮವಾರ ಕೊಲ್ಲಂ ಓಯೂರಿನಿಂದ ಅಪಹರಣ ಮಾಡಿ ತಾಯಿಗೆ ಕರೆ ಮಾಡಿ 10 ಲಕ್ಷ ರೂ. ನೀಡುವಂತೆ ಡಿಮ್ಯಾಂಡ್ ಮಾಡಿತ್ತು.

ಕಿಡ್ನಾಪ್ ಗೊಂಡ 20 ಗಂಟೆಗಳ ನಂತರ ಮಗು ಸುರಕ್ಷಿತವಾಗಿ ಪೊಲೀಸರ ಕೈ ಸೇರಿದ್ದು, ಸದ್ಯ ಅಪಹರಣಕಾರರ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Latest Indian news

Popular Stories