ದ್ವೇಷ ರಾಜಕೀಯ ದೂರೀಕರಿಸಿ ಸಾಮರಸ್ಯದ ನಾಡು ಕಟ್ಟುವ ಕಡೆಗೆ ವಿದ್ಯಾರ್ಥಿ ಶಕ್ತಿಯ ಮತ ಚಲಾವಣೆಯಾಗಲಿ – ಎಸ್.ಐ.ಓ ಉಡುಪಿ ಜಿಲ್ಲೆ

ಉಡುಪಿ | 2024ರ ರಾಷ್ಟ್ರೀಯ ಸಾರ್ವತ್ರಿಕ ಚುನಾವಣೆಯು ನಾಳೆ ಎಪ್ರಿಲ್ 26 ರಂದು ನಡೆಯಲಿರುವ ಹಿನ್ನಲೆಯಲ್ಲಿ ಎಲ್ಲಾ ಪ್ರಜ್ಞಾವಂತ ಪ್ರಜೆಗಳಿಗೆ ಒಂದು ವಿಶೇಷ ದಿನವಾಗಿದೆ. ನಮ್ಮ ಸಂವಿಧಾನಬದ್ಧ ಹಕ್ಕನ್ನು ಬಹಳ ಜಾಣ್ಮೆಯಿಂದ ಚಲಾಯಿಸಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದೆ.

ಎಸ್.ಐ.ಓ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಆಗಿರುವುದರಿಂದ ಈಗಾಗಲೇ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಸೇರಿ ತಯಾರಿಸಿದಂತಹ ಪ್ರಣಾಳಿಕೆಯನ್ನು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ತುರ್ತಾಗಿ ಅವಶ್ಯಕತೆಯಿರುವ ಬೇಡಿಕೆಗಳನ್ನು ಸಹ ವಿವಿಧ ಪಕ್ಷದ ನಾಯಕರಿಗೆ ನೀಡಿದ್ದೇವೆ.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಯುವಕರು ನಾಳೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಯಾವುದೇ ಆಮಿಷಕ್ಕೆ ಮತ್ತು ಒತ್ತಡಕ್ಕೆ ಬಲಿಯಾಗದೆ ಮುಂದಿನ ಐದು ವರ್ಷಗಳ ಕಾಲ ಶೈಕ್ಷಣಿಕವಾಗಿ ಉದ್ಯೋಗ ಸೃಷ್ಟಿಸುವ ಹಾಗೂ ನಾಡಿನ ಜನತೆಗೆ ದ್ವೇಷ ರಾಜಕೀಯ, ಕೋಮು ಸಂಘರ್ಷದ ವಾತಾವರಣದಿಂದ ದೂರೀಕರಿಸಿ ಪ್ರೀತಿ,ಸಾಮರಸ್ಯ ಸಹಬಾಳ್ವೆ ಕಡೆಗೆ ಬಯಸುವ ದೃಷ್ಟಿಯಿಂದ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತಿದ್ದೇವೆ ಎಂದು ಎಸ್.ಐ.ಓ ಪ್ರಕಟಣೆಯಲ್ಲಿ ತಿಳಿಸಿದೆ‌.

Latest Indian news

Popular Stories