Featured StoryUttara Kannada
ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಾರವಾರ : ಭಟ್ಕಳ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಹಾಗೂ ಡೈವರ್ ಶಂಕರ್ ನಾಯ್ಕ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಮುಖ್ಯಾಧಿಕಾರಿಯನ್ನು ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.
ಯುಜಿಡಿ ಸಂಪರ್ಕ ನಿರಪೇಕ್ಷಣಾ ಪತ್ರ ಪಡೆಯುವಾಗ ರೂ. 50000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ.
ಮಹಮದ್ ಇದ್ರೀಸ್ ಎಂಬುವವರಿಗೆ ನಿರಪೇಕ್ಷ ಪತ್ರ ಪಡೆಯಲು ಪುರಸಭೆಗೆ ಅಲೆದಾಡುತ್ತಿದ್ದರು. ಪುರಸಭೆ ಮುಖ್ಯಾಧಿಕಾರಿ ಹಣಕ್ಕೆ ಬೇಡಿಕೆ ಯಿಟ್ಟಾಗ ಲೋಕಾಯುಕ್ತರನ್ನು ಇದ್ರೀಸ್ ಸಂಪರ್ಕಿಸಿದ್ದರು. ಇಂದು ಲಂಚದ ಹಣ ನೀಡುವಾಗ ಮುಖ್ಯಾಧಿಕಾರಿಯ ವಾಹನ ಚಾಲಕನ ಕೈಯಲ್ಲಿ ಹಣ ನೀಡಲಾಯಿತು ಎನ್ನಲಾಗಿದೆ. ತಕ್ಷಣ ಲೋಕಾಯುಕ್ತರು ದಾಳಿ ಮಾಡಿ, ವಾಹನ ಚಾಲಕ ಹಾಗೂ ಮುಖ್ಯಾಧಿಕಾರಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ .


……