Loksabha;15 ಕ್ಷೇತ್ರದ ಅಭ್ಯರ್ಥಿಗಳ ಬಿಜೆಪಿಪಟ್ಟಿ ಬಿಡುಗಡೆ: ಶರತ್ ಕುಮಾರ್ ಪತ್ನಿಗೆ ಟಿಕೆಟ್

ಹೊಸದಿಲ್ಲಿ: ಲೋಕಸಭೆ ಚುನಾವನೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು ಇಂದು ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದೆ. ತಮಿಳುನಾಡಿನ 14 ಮತ್ತು ಪುದುಚೇರಿಯ ಒಂದು ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಗುರುವಾರ ಅಣ್ಣಾಮಲೈ ಸೇರಿ ತಮಿಳುನಾಡಿನ ಆರು ಕ್ಷೇತ್ರದ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಇಂದು (ಶುಕ್ರವಾರ) 14 ಕ್ಷೇತ್ರಗಳ ಪಟ್ಟಿ ರಿಲೀಸ್ ಮಾಡಿದೆ.
ನಟ ಶರತ್ ಕುಮಾರ್ ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು ವಿರುಧ್ ನಗರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಚೆನ್ನೈ ಉತ್ತರ ಕ್ಷೇತ್ರದಲ್ಲಿ ಆರ್.ಸಿ ಪೌಲ್ ಕಣಗರಾಜ್, ಚಿದಂಬರಂ ಕ್ಷೇತ್ರದಿಂದ ಶ್ರೀಮತಿ ಪಿ.ಕಾರ್ತ್ಯಾಯಿನಿ ಸ್ಪರ್ಧಿಸಲಿದ್ದಾರೆ. ಪುದುಚೇರಿಯಿಂದ ಎ.ನಮಸ್ಸಿವಾಯಮ್ ಅವರು ಬಿಜೆಪಿ ಟಿಕೆಟ್ ಪಡೆದಿದ್ದಾರೆ.

ತಮಿಳುನಾಡಿನ ಒಟ್ಟು 39 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಉಳಿದ 19 ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ನೀಡಲಾಗಿದೆ. ಈ ಪೈಕಿ ಪಿಎಂಕೆ 10, ಟಿಎಂಕೆ 3, ಎಎಂಎಂಕೆ 2, ಐಜೆಕೆ, ಎನ್ ಜೆಪಿ ಮತ್ತು ಇತರ ಎರಡು ಪ್ರಾದೇಶಿಕ ಪಕ್ಷಗಳು ತಲಾ ಒಂದರಲ್ಲಿ ಸ್ಪರ್ಧಿಸಲಿದೆ.

Latest Indian news

Popular Stories