ನನ್ನ ಬಳಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ಇರಲಿಲ್ಲ ಆದ್ದರಿಂದ ಟಿಕೆಟ್ ನಿರಾಕರಿಸಿದೆ: ನಿರ್ಮಲಾ ಸೀತಾರಾಮನ್

ನವದೆಹಲಿ: ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡದೇ ಇರುವ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸ್ವತಃ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವುದಕ್ಕೆ ಬೇಕಾಗಿರುವಷ್ಟು ಹಣ ತಮ್ಮ ಬಳಿ ಇಲ್ಲವಾದ್ದರಿಂದ ಟಿಕೆಟ್ ಆಫರ್ ನ್ನು ನಿರಾಕರಿಸಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಲೋಕಸಭೆಗೆ ಸ್ಪರ್ಧಿಸುವಂತೆ ಅಹ್ವಾನ ನೀಡಿದ್ದರು. ಈ ಬಗ್ಗೆ ಒಂದು ವಾರ ಅಥವಾ 10 ದಿನಗಳು ಯೋಚನೆ ಮಾಡಿದ್ದೆ. ಆದರೆ ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ಇಲ್ಲದ ಕಾರಣ ಸ್ಪರ್ಧೆಯ ಆಹ್ವಾನವನ್ನು ನಿರಾಕರಿಸಿದೆ ಎಂದು ಹೇಳಿದ್ದಾರೆ.

ಇನ್ನು ಆಂಧ್ರಪ್ರದೇಶದಿಂದ ಸ್ಪರ್ಧಿಸುವುದೋ ಅಥವಾ ತಮಿಳುನಾಡಿನಿಂದಲೋ ಎಂಬ ಬಗ್ಗೆಯೂ ಸಮಸ್ಯೆ ಇತ್ತು ಇದಷ್ಟೇ ಅಲ್ಲದೇ ಧರ್ಮ, ಜಾತಿ ಸೇರಿದಂತೆ ಗೆಲುವಿನ ಇನ್ನೂ ಹಲವು ಮಾನದಂಡಗಳ ಬಗ್ಗೆಯೂ ಪ್ರಶ್ನೆಗಳಿದ್ದವು ಆದ್ದರಿಂದ ಇವೆಲ್ಲವನ್ನೂ ನಿಭಾಯಿಸುವುದಕ್ಕೆ ನನಗೆ ಸಾಧ್ಯವಿಲ್ಲ ಎಂದೆನಿಸಿ ಟಿಕೆಟ್ ನಿರಾಕರಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಟೈಮ್ಸ್ ನೌ ಶೃಂಗ 2024 ರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಿರ್ಮಲಾ ಸೀತಾರಾಮನ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.

Latest Indian news

Popular Stories