ಸಂಸತ್ ಭದ್ರತಾ ಲೋಪ: ಮನೋರಂಜನ್‌ ಡೈರಿಯಲ್ಲಿ ಹೆಸರು, ಬಾಗಲಕೋಟೆಯ ಸಾಯಿಕೃಷ್ಣ ದೆಹಲಿ ಪೊಲೀಸ್ ವಶಕ್ಕೆ!

ಬಾಗಲಕೋಟೆ: ಸಂಸತ್ ಭದ್ರತಾ ಲೋಪ ಪ್ರಕರಣದ ತನಿಖೆ ತೀವ್ರಗೊಳಿಸಿರುವ ದೆಹಲಿ ಪೊಲೀಸರು ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ಮೈಸೂರು ಮೂಲದ ಮನೋರಂಜನ್​ ಸಹಪಾಠಿಯೋರ್ವನನ್ನು ವಶಕ್ಕೆ ಪಡೆದಿದ್ದಾರೆ.

ಬಾಗಲಕೋಟೆ ಮೂಲದ ಸಾಯಿಕೃಷ್ಣ ಎಂಬಾತನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಯಿಕೃಷ್ಣ ಬಾಗಲಕೋಟೆ ನಿವೃತ್ತ ಡಿವೈಎಸ್ ಪಿ ವಿಠಲ ಜಗಲಿ ಅವರ ಪುತ್ರ ಎಂದು ತಿಳಿದುಬಂದಿದೆ. ಸಾಯಿಕೃಷ್ಣ ಆರೋಪಿ ಮನೋರಂಜನ್ ಸ್ನೇಹಿತನಾಗಿದ್ದು, ಬೆಂಗಳೂರಿನ ಬಿಐಟಿ ಇಂಜಿನಿಯರಿಂಗ್‌ ಕಾಲೇಜುನಲ್ಲಿ ಸಹಪಾಠಿಯಾಗಿದ್ದರು.

ದೆಹಲಿ ಪಿಎಸ್ಐ ಪಿಂಟು ಶರ್ಮಾ ಹಾಗೂ ನಾಲ್ಕು ಜನರ ತಂಡ ಇಂದು ಸಂಜೆ 7 ಗಂಟೆ ವೇಳೆಗೆ ಬಾಗಲಕೋಟೆಯಲ್ಲಿರುವ ವಿದ್ಯಾಗಿರಿ ಮನೆಗೆ ಭೇಟಿ ನೀಡಿ ಸಾಯಿಕೃಷ್ಣನನ್ನು ವಶಕ್ಕೆ ಪಡೆದರು. ನಂತರ ನವನಗರ ಠಾಣೆಯಲ್ಲಿ ಕೆಲ ಕಾಲ ವಿಚಾರಣೆ ನಡೆಸಿ ದೆಹಲಿಗೆ ಕರೆದೊಯ್ದರು ಎಂದು ತಿಳಿದುಬಂದಿದೆ.

2008 -2009ರ ಅವಧಿಯಲ್ಲಿ ಮನೋರಂಜನ್ ಮತ್ತು ಸಾಯಿಕೃಷ್ಣ ರೂಮ್ ಮೇಟ್ ಆಗಿದ್ದರು. 2012ರಲ್ಲಿ ದೆಹಲಿಗೆ ಹೋಗಿದ್ದ ಮನೋರಂಜನ್ ಡೈರಿಯಲ್ಲಿ ಸಾಯಿಕೃಷ್ಣ ಹೆಸರು ಬರೆದಿನಂತೆ. ಹೀಗಾಗಿ ಪೊಲೀಸರು ಸಾಯಿಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಎನ್ರಿಚ್ ವಿಡಿಯೊ ಕಂಪನಿ ಸೀನಿಯರ್ ಸಾಪ್ಟವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಾಯಿಕೃಷ್ಣ ವರ್ಕ್ ಫರ್ಮ್ ನಿಂದಾಗಿ ಬಾಗಲಕೋಟೆಯ ತಮ್ಮ ಮನೆಯಲ್ಲೇ ಕೆಲಸ ಮಾಡುತ್ತಿದ್ದನು.

Latest Indian news

Popular Stories