
ಮಸೀದಿ ಗೋಡೆ ಮೇಲೆ ʼಜೈ ಶ್ರೀರಾಮ್ʼ ಬರೆದ ಕಿಡಿಗೇಡಿಗಳು; ಕ್ರಮಕ್ಕೆ ಆಗ್ರಹ
ಲಕ್ನೋ: ಮಸೀದಿಯ ಗೋಡೆ ಮೇಲೆ ʼಜೈ ಶ್ರೀರಾಮ್ʼ ಘೋಷಣೆಯನ್ನು ಬರೆದು, ಹಾನಿ ಮಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ (ಡಿ.23 ರಂದು) ಉತ್ತರ ಪ್ರದೇಶದ ಅಲಿಗಢ್ನ ದೆಹಲಿ ಗೇಟ್ ಮಸೀದಿಯೊಂದರ ʼಜೈ ಶ್ರೀರಾಮ್ʼ ಎನ್ನುವ ಬರಹವನ್ನು ಬರೆಯಲಾಗಿದೆ. ಆ ಬಳಿಕ ಗೋಡೆಯನ್ನು ಧ್ವಂಸ ಮಾಡಲಾಗಿದೆ. ಈ ಘಟನೆಯ ವಿಡಿಯೋ ಕ್ಯಾಮಾರದಲ್ಲಿ ಸೆರೆಯಾಗಿದೆ.
ಘಟನೆ ನಂತರ ಸಮಾಜವಾದಿ ಪಕ್ಷದ (ಎಸ್ಪಿ) ನಿಯೋಗವು ಪೊಲೀಸರನ್ನು ಭೇಟಿ ಮಾಡಿ, ಈ ಬಗ್ಗೆ ಔಪಚಾರಿಕ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೃಗಾಂಕ್ ಶೇಖರ್ ಪಾಠಕ್ ತಿಳಿಸಿದ್ದಾರೆ.
ಕೆಲವು ಸಮಾಜ ವಿರೋಧಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ನಗರದ ವಾತಾವರಣವನ್ನು ಹಾಳು ಮಾಡಿದ್ದಾರೆ. ಕೂಡಲೇ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ನಿಯೋಗದಲ್ಲಿದ್ದ ಸಮಾಜವಾದಿ ಪಕ್ಷದ ಮನೋಜ್ ಯಾದವ್ ಎಚ್ಚರಿಸಿದ್ದಾರೆ.
अलीगढ़ में दंगा भड़काने की कोशिश, एक मस्जिद पर शर्पसंदों द्वारा जय श्रीराम लिखा गया, पुलिस ने मौके पर पहुंचकर धार्मिक नारे को रंग पुतवा कर मीटवाया, आपसी समझौते के बाद शांति बहाल। pic.twitter.com/VNKDLHjel2
— Millat Times (@Millat_Times) December 24, 2023
ಶೀಘ್ರದಲ್ಲಿ ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಪೊಲೀಸರು ಹೇಳಿದ್ದಾರೆ.




