Featured StoryState News

ಕೆ ಮಾಡಳ್ ವಿರೂಪಾಕ್ಷ ಬಿಜೆಪಿಯಿಂದ ಉಚ್ಚಾಟನೆ

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ಕಚ್ಚಾವಸ್ತು ಖರೀದಿ ಟೆಂಡರ್‌ ಪ್ರಕ್ರಿಯೆ ಲಂಚ ಪ್ರಕರಣದ ಎ-1 ಆರೋಪಿಯಾಗಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ (BJP MLA) ಕೆ ಮಾಡಾಳ್‌ ವಿರೂಪಾಕ್ಷಪ್ಪ (Madalu Virupakshappa) ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ರಾಜ್ಯ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.

ಲೋಕಾಯುಕ್ತ ಟ್ರ್ಯಾಪ್ ಪ್ರಕರಣ (Lokayukta) ಹಿನ್ನೆಲೆ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಕೇಂದ್ರ ಶಿಸ್ತು ಸಮಿತಿ ರಾಜ್ಯ ಘಟಕಕ್ಕೆ ಉಚ್ಛಾಟನೆ ಮಾಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಘಟಕ ಶಾಸಕರನ್ನು ಉಚ್ಛಾಟನೆ (MLA Expulsion) ಮಾಡಿ ಆದೇಶ ಹೊರಡಿಸಿದೆ. ಇದರ ನಡುವೆಯೇ ಜಾಮೀನು ಸಿಗುತ್ತಿದ್ದಂತೆ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಮಾಡಾಳ್​, ಮನೆಯಲ್ಲಿ ಸಿಕ್ಕಿರುವ ಹಣ ಕ್ರಷರ್ ಹಾಗೂ ಅಡಿಕೆ ತೋಟದ ಹಣ. ಲೋಕಾಯುಕ್ತಕ್ಕೆ ಹಣದ ಎಲ್ಲಾ ಲೆಕ್ಕವನ್ನು ಕೊಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ, ಕಚೇರಿಯಲ್ಲಿ ಯಾರೋ ಇಬ್ಬರು ಹಣ ತಂದಿಟ್ಟು ಓಡಿ ಹೋದರು. ನನ್ನ ಮಗ ಸುಮ್ಮನೆ ಕುಳಿತಿದ್ದ ಅಂತಲೂ ಹೊಸ ಕಥೆ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button