ಮಡಿಕೇರಿ: ಗುರುವಾರ ಬೆಳಗ್ಗೆ ಕೊಳಕೇರಿ ಮಾರ್ಗವಾಗಿ ನಾಪೋಕ್ಲು ಮಡಿಕೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದೆ.ಚಾಲಕನ ವೇಗದ ಚಾಲನೆ ಯಿಂದ ನಿಯಂತ್ರಣ ತಪ್ಪಿ ಕೋಟೇರಿ ಮುಖ್ಯ ರಸ್ತೆಯ ಬದಿಯ ಹಳ್ಳಕ್ಕೆ ಬಿದ್ದ ಕುರಿತು ವರದಿಯಾಗಿದೆ.
ನಾಪೋಕ್ಲು ಕಕ್ಕಬ್ಬೆ ಮುಖ್ಯರಸ್ತೆಯ ಕೋಟೇರಿ ಬಳಿ ಘಟನೆ ಸಂಭವಿಸಿದ್ದು ಶಾಲಾ ಮಕ್ಕಳು ಸೇರಿದಂತೆ ಬಸ್ ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ.
ಗಾಯಾಳುಗಳಿಗೆ ನಾಪೋಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಚಾಲಕನ ವೇಗದ ಚಾಲನೆ ಮತ್ತು ಇಲಾಖೆ ರಸ್ತೆ ನಿರ್ಮಾಣ ಸಂದರ್ಭ ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.