ಸಿಪಿ ಯೋಗೆಶ್ವರ್ ಬಾವ ಮಹದೇವಯ್ಯ ಕಿಡ್ನಾಪ್ ಪ್ರಕರಣ | ಪತ್ತೆಯಾದ ಕಾರು

ರಾಮನಗರ: ಸಿ.ಪಿ. ಯೋಗೀಶ್ವರ್ ಅವರ ಬಾವ ಮಹದೇವಯ್ಯ ಕಿಡ್ನಾಪ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಅದರಂತೆ ಮಹದೇವಯ್ಯ ಅವರ ಕಾರು ಚಾಮರಾಜನಗದಲ್ಲಿ ಪತ್ತೆಯಾಗಿದ್ದು ಕಾರಿನ ಡಿಕ್ಕಿಯಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದು ಪೊಲೀಸರು ಹೆಚ್ಚಿನ ತಪಾಸಣೆ ನಡೆಸುತ್ತಿದ್ದಾರೆ.

ಕಳೆದೆರಡು ದಿನಗಳಿಂದ ನಾಪತ್ತೆಯಾಗಿರುವ ಮಹದೇವಯ್ಯ ಅವರ ಪತ್ತೆಗೆ ಚನ್ನಪಟ್ಟಣ ಪೊಲೀಸರು ಬಲೆ ಬೀಸಿದ್ದು ಇದೀಗ ಮಹದೇವಯ್ಯ ಅವರ ಕಾರು ಚಾಮರಾಜನಗರದಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ರಾಮಾಪುರ ಪೊಲೀಸರು, ಚನ್ನಪಟ್ಟಣ ಡಿವೈಎಸ್‌ಪಿ, ಸಿಪಿವೈ ಭೇಟಿ, ಪರಿಶೀಲನೆ ನಡೆಸಿದ ವೇಳೆ ಕಾರಿನ ಡಿಕ್ಕಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ.

ಘಟನೆಗೆ ಸಂಬಂಧಿಸಿ ಪೊಲೀಸರು ಅಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಕಾರಿನ ಡಿಕ್ಕಿಯಲ್ಲಿ ರಕ್ತದ ಕಲೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ಮೂಡಿದ್ದು ಇದೀಗ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ, ಫಿಂಗರ್ ಫ್ರಿಂಟ್ ತಂಡ, ಶ್ವಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ‌ ಪತ್ತೆಯಾಗಿರುವ ಕಾರನ್ನು ನೈಟ್ ಬೀಟ್ ಪೊಲೀಸರು ಪತ್ತೆಹಚ್ಚಿದ್ದು ಪರಿಶೀಲನೆ ನಡೆಸಿದಾಗ ಮಹದೇವಯ್ಯ ಅವರಿಗೆ ಸೇರಿದ್ದ ಕಾರು ಎಂಬುದು ಗೊತ್ತಾಗಿದೆ. ಈ ವೇಳೆ ಕಾರನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ.

Latest Indian news

Popular Stories