ಮಂಗಳೂರು: ಈಜಲು ತೆರಳಿದ್ದ ಯುವಕ ನೀರುಪಾಲು

ಮಂಗಳೂರು: ಸ್ನೇಹಿತರ ಜೊತೆ ಈಜಲೆಂದು ತೆರಳಿದ್ದ ಯುವನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಗರದ ಹೊರವಲಯದ ಮರವೂರಿನಲ್ಲಿ ಸಂಭವಿಸಿದೆ.

ಮೃತರನ್ನು ಚೊಕ್ಕಬೆಟ್ಟುವಿನ ಶಾಕಿರ್ (30) ಎಂದು ಗುರುತಿಸಲಾಗಿದೆ. ಶಾಕಿರ್ ತನ್ನ ಗೆಳೆಯರೊಂದಿಗೆ ಮರವೂರು ರೈಲ್ವೆ ಸೇತುವೆಯ ಕೆಳಗಿನ ನದಿಯಲ್ಲಿ ಈಜಲು ತೆರಳಿದ್ದರು.
ಈ ವೇಳೆ ಶಾಕಿರ್ ಆಯತಪ್ಪಿ ನದಿಗೆ ಬಿದ್ದಿದ್ದು ನೀರಿನಲ್ಲಿ ಮುಳುಗಿದ್ದಾರೆ.

ಕೂಡಲೇ ಜೊತೆಗಿದ್ದವರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಮೃತದೇಹ ಮೇಲಕ್ಕೆತ್ತಿದ್ದಾರೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories