ಮಂಗಳೂರು: ಚೂರಿ ಇರಿತ ಪ್ರಕರಣ – ಮತ್ತೋರ್ವ ಆರೋಪಿ ಬಂಧನ

ಮಂಗಳೂರು, ಸೆ.6: ಸುರತ್ಕಲ್‌ನ ಕಳವಾರು ಬಸ್ ನಿಲ್ದಾಣದ ಬಳಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಿನ್ನಿಕಂಬಳ ಕೈಕಂಬ ನಿವಾಸಿ ಪುನಿತ್ (29) ಪೊಲೀಸರ ವಶದಲ್ಲಿರುವ ಆರೋಪಿ.

ಪುನಿತ್ ಬಂಧನದಿಂದ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

Latest Indian news

Popular Stories