ಮಣಿಪಾಲ: ವೈಶ್ಯವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ದಾಳಿ – ಇಬ್ಬರ ಬಂಧನ

ಉಡುಪಿ, ಜು.22: ವೇಶ್ಯಾವಾಟಿಕೆ ನಡೆಸುತ್ತಿದ್ದ ಮಣಿಪಾಲದ ವಿದ್ಯಾರತ್ನ ನಗರದಲ್ಲಿರುವ ಮನೆಗೆ ಜು.21ರಂದು ರಾತ್ರಿ ವೇಳೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಇಬ್ಬರು ಪಿಂಪ್ಗಳನ್ನು ಬಂಧಿಸಿದ್ದಾರೆ.
ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದ ಅಬ್ದುಲ್ ಸಲಾಮತ್ ಹಾಗೂ ಚಂದ್ರಹಾಸ ಬಂಧಿತ ಆರೋಪಿಗಳು. ವೇಶ್ಯಾವಾಟಿಕೆ ವ್ಯವಹಾರ ನಡೆಸಲು ಬಳಸಿಕೊಂಡಿದ್ದ ಮೂವರು ಬೆಂಗಳೂರು ಮೂಲ ಹಾಗೂ ಇನ್ನಿಬ್ಬರು ಮಹಾರಾಷ್ಟ್ರದ ನಾಸಿಕ್ ಹಾಗೂ ಮುಂಬೈ ನಿವಾಸಿಗಳು ಸೇರಿದಂತೆ 5 ಮಂದಿ ನೊಂದ ಮಹಿಳೆಯರನ್ನು ರಕ್ಷಿಸಿದ್ದಾರೆ. ಬಂಧಿತರಿಂದ 4 ಮೊಬೈಲ್, 1 ಕಾರು, 2 ಬೈಕ್ ಹಾಗೂ 10,000ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

IMG 20230722 WA0032 Featured Story, Udupi


ಅನೈತಿಕ ಚಟುವಡಟಿಕೆ ಮಾಡಲು ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸಿ ಕೊಠಡಿಗಳನ್ನು ಒದಗಿಸಿದ ಪ್ರಮುಖ ಆರೋಪಿ ಖಾಲಿದ್ ಎಂಬಾತ ಸ್ಥಳದಿಂದ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಶಾಂತಿನಗರದ ಮನೆಯ ಮೇಲೆ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ನೇತೃತ್ವದ ತಂಡ ದಾಳಿ ಮಾಡಿ ಮನೆಯನ್ನು ವೇಶ್ಯಾವಾಟಿಕೆಗೆ ಚಟುವಟಿಕೆಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಮನೆಯನ್ನು ಜಪ್ತಿ ಮಾಡಲಾಗಿದೆ.

IMG 20230722 WA0030 1 Featured Story, Udupi


ಉಡುಪಿ ಎಸ್ಪಿ ಅಕ್ಷಯ್ ಮಚ್ಚಿಂದ್ರ ಹಾಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಟಿ., ಉಡುಪಿ ಡಿವೈಎಸ್ಪಿದಿನಕರ ಕೆ.ಪಿ. ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ನಿರೀಕ್ಷಕ ದಿವಾಕರ್ ಹಾಗೂ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ. ನೇತೃತ್ವದಲ್ಲಿ ಮಣಿಪಾಲ ಎಸ್ಸೈ ಅಬ್ದುಲ್ ಖಾದರ್, ಸಿಬ್ಬಂದಿ ಸುಕುಮಾರ್ ಶೆಟ್ಟಿ, ಇಮ್ರಾನ್, ಸುರೇಶ್ ಕುಮಾರ್, ಜ್ಯೋತಿ ನಾಯಕ್, ಅರುಣ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ

Latest Indian news

Popular Stories