ಮಣಿಪಾಲ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ – ಪ್ರಕರಣ ದಾಖಲು

ಮಣಿಪಾಲದಲ್ಲಿ ವಿದ್ಯಾರ್ಥಿ ಮೇಲೆ ಕ್ಷುಲ್ಲಕ್ಕ ಕಾರಣಕ್ಕೆ ಗುಂಪೊಂದರಿಂದ ಹಲ್ಲೆ ನಡೆದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ಸುಮಾರು‌ ಐದಾರು ಮಂದಿಯಿದ್ದ ತಂಡ ,ವಿದ್ಯಾರ್ಥಿಯೋರ್ವನನ್ನು ಅಟ್ಟಾಡಿಸಿ ಕೊಂಡು ಬಂದು ,ಅಪಾರ್ಟ್ ಮೆಂಟ್ ಗೆ ನುಗ್ಗಿ ಯದ್ವಾತದ್ವಾ‌ ಹಲ್ಲೆ‌ ಮಾಡಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಣಿಪಾಲದ ಸರಳಬೆಟ್ಟು ವಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಮಣಿಪಾಲದ ಎಂಐಟಿ ಯ ಬಿ.ಟೆಕ್ ವಿದ್ಯಾರ್ಥಿ ಅಭಿಷೇಕ್ (23) ಎನ್ನುವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ.

ತನ್ನ ರೂಂಗೆ ಒಳಹೊಕ್ಕುವ ಮುನ್ನವೇ ದಾಳಿ ನಡೆದಿದ್ದು ಹಲ್ಲೆಯ ನಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories