ಮಣಿಪಾಲ: ಹತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಕುರಿತು ವರದಿಯಾಗಿದೆ.
ಕಾಪುವಿನ ಅಜೀತ್ (17) ಇವರು ಸರ್ಕಾರಿ ಕಿರಿಯ ಕಾಲೇಜು ಪ್ರೌಡಶಾಲೆ ಮುದರಂಗಡಿಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು, 10 ನೇ ತರಗತಿಯ ಪರೀಕ್ಷೆಯಲ್ಲಿ ಅಜೀತ್ ಗಣಿತ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ಅನುತ್ತೀರ್ಣ ಆಗಿದ್ದು. ನಂತರ ಎಪ್ರೀಲ್ ನಲ್ಲಿ ಪುನಃ ಪರೀಕ್ಷೆ ಬರೆದಿದ್ದು. ಆಗಲೂ ಕೂಡಾ ಅನುತ್ತೀರ್ಣ ಆಗಿರುತ್ತಾನೆ.
ಅಜೀತ್ ನು ಶಾಲೆ ಇಲ್ಲದ ಕಾರಣ ಕಳೆದ 4 ತಿಂಗಳಿಂದ ಮಣಿಪಾಲದಲ್ಲಿರುವ ಆತನ ಅಜ್ಜಿ ಮನೆಗೆ ಬಂದು ವಾಸಮಾಡಿಕೊಂಡಿದ್ದು, ಜುಲೈ 3 ರಂದು ಅಜೀತ್ ನು ಬೆಳಿಗ್ಗೆ 10:30 ಗಂಟೆಗೆ ಪದ್ಮ ಅಜ್ಜಿ ಮನೆಗೆ ಬಾತ್ ರೂಮ್ ಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾನೆ.
ಅಜೀತ್ ಮನೆಯಲ್ಲಿ ಕಾಣದೇ ಇದ್ದಾಗ ಹುಡುಕಾಡಿದಾಗ ಬಾತ್ ರೂಮ್ ನ ಬಾಗಿಲಿನ ದಾರಂದಕ್ಕೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದ ಕಂಡು ಬಂದಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 30/2024 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.