ಬೆಂಗಳೂರು :ಫಾರ್ಮಸಿ ಕಂಪನಿ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು,ಅವಧಿ ಮೀರಿದ ಔಷಧಿಗಳು ಮತ್ತು ಕಾಸ್ಮಿಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ತಂದೆ-ಮಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹಾಗೂ ಸುಮಾರು ಒಂದೂವರೆ ಕೋಟಿ ರೂ. ಮೌಲ್ಯದ ಅವಧಿ ಮೀರಿದ ಔಷಧಿಗಳು ಮತ್ತು ಸೌಂದರ್ಯವರ್ಧಕಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ೧.೫ ಕೋಟಿ ರೂ. ಮೌಲ್ಯದ ಅವಧಿ ಮೀರಿದ ವಿಟಮಿನ್ ಸಿ, ಬಿ೩ ಮಾತ್ರೆಗಳುಳ್ಳ ಸಾವಿರಾರು ಬಾಕ್ಸ್‌ಗಳು ಹಾಗೂ ಸೌಂದರ್ಯ ವರ್ಧಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಆರೋಪಿಗಳು ಅವಧಿ ಮೀರಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇವರು ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಮೆಡಿಗೇಟ್ಸ್ ಎಲ್‌ಎಲ್‌ಸಿ ಎಂಬ ಫಾರ್ಮಸಿ ಕಂಪನಿ ನಡೆಸುತ್ತಿದ್ದು ಅದರಲ್ಲಿ ಅವಧಿ ಮೀರಿದ ವಿಟಮಿನ್ ಸಿ, ಬಿ೩ ಮಾತ್ರೆಗಳು ಹಾಗೂ ಸೌಂದರ್ಯ ವರ್ಧಕ ವಸ್ತುಗಳನ್ನು ತುಂಬಿದ್ದ ಸಾವಿರಾರು ಬಾಕ್ಸ್‌ಗಳನ್ನು ಸಂಗ್ರಹಿಸುತ್ತಿದ್ದರು.
ಹರಿಯಾಣ, ಪಂಜಾಬ್,ಚಂಡೀಗಢ ಹಾಗೂ ಇತರೆ ರಾಜ್ಯಗಳಿಂದ ಅವಧಿ ಮೀರಿದ ಔಷಧಿಗಳು ಮತ್ತು ಕಾಸ್ಮಿಟಿಕ್‌ಗಳನ್ನು ತರಿಸಿಕೊಂಡು ಅದನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.ಹೀಗೆ ೧೯ ಮಾದರಿಯ ಔಷಧಿಗಳು ಮತ್ತು ಕಾಸ್ಮಿಟಿಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಮಾಹಿತಿಯನ್ನು ಔಷಧ ನಿಯಂತ್ರಣ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ನಗರ ಪೊಲೀಸ್ ಆಯಕ್ತ ಬಿ.ದಯಾನಂದ ತಿಳಿಸಿದ್ದಾರೆ.