
ಸ್ನಾರ್ಕ್ಲಿಂಗ್, ವಾಕ್ ಆನ್ ಬೀಚ್: ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ
ನವ ದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಲಕ್ಷದ್ವೀಪ ಭೇಟಿಯ ಸಂದರ್ಭದಲ್ಲಿ ಸಾಹಸಮಯ ಕ್ರೀಡೆಯಲ್ಲಿ ತೊಡಗಿಸಿಕೊಂಡಿರಯವುದನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.
ಸ್ನಾರ್ಕೆಲಿಂಗ್ ಮಾಡಲು ಪ್ರಯತ್ನಿಸಿದ ಮೋದಿ ಇದನ್ನು “ಉಲ್ಲಾಸದಾಯಕ” ಅನುಭವ ಎಂದು ಹೇಳಿದ್ದಾರೆ. ಹಲವು ಚಟುವಟಿಕೆಯನ್ನು ಪ್ರಯತ್ನಿಸುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸಾಹಸ ಪ್ರಿಯರು ತಮ್ಮ ಬಕೆಟ್ ಪಟ್ಟಿಗೆ ಲಕ್ಷದ್ವೀಪವನ್ನು ಸೇರಿಸಬೇಕೆಂದು ಸಲಹೆ ನೀಡಿದರು.
“ತಮ್ಮಲ್ಲಿರುವ ಸಾಹಸಿಗಳನ್ನು ಅಪ್ಪಿಕೊಳ್ಳಲು ಬಯಸುವವರಿಗೆ, ಲಕ್ಷದ್ವೀಪವು ನಿಮ್ಮ ಪಟ್ಟಿಯಲ್ಲಿರಬೇಕು. ನನ್ನ ವಾಸ್ತವ್ಯದ ಸಮಯದಲ್ಲಿ, ನಾನು ಸ್ನಾರ್ಕೆಲಿಂಗ್ ಅನ್ನು ಸಹ ಪ್ರಯತ್ನಿಸಿದೆ – ಇದು ಎಷ್ಟು ಆಹ್ಲಾದಕರ ಅನುಭವ!” ಅವರು ಸ್ನಾರ್ಕೆಲ್ ಮತ್ತು ಲೈಫ್ ವೆಸ್ಟ್ ಧರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರು ಮೀನು ಮತ್ತು ಹವಳದ ಬಂಡೆಗಳ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಲಕ್ಷ್ಯ ದ್ವೀಪದಲ್ಲಿ ನಡೆದ ಕಾರ್ಯಕ್ರಮ ಫೋಟೊ ಕೂಡ ಹಂಚಿಕೊಂಡಿದ್ದಾರೆ. ಲಕ್ಷ್ಯದ್ವೀಪದಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆ ನಿವಾಸಿಗಳಾಗಿದ್ದಾರೆ.







