35ನೇ ಮೌಲಾನಾ ಮುಹಮ್ಮದ್ ಅಲಿ ಜೌಹರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೀರ ರ಼್ಯಾಟ್-ಮೈನರ್ಸ್’ಗೆ ಸನ್ಮಾನ

ದೆಹಲಿ: ಮೌಲಾನಾ ಮುಹಮ್ಮದ್ ಅಲಿ ಜೌಹರ್ ಅಕಾಡೆಮಿ ತನ್ನ 35 ನೇ ಪ್ರಶಸ್ತಿ ಸಮಾರಂಭವನ್ನು ವಿವಿಧ ಕ್ಷೇತ್ರಗಳ ಅತ್ಯುತ್ತಮ ವ್ಯಕ್ತಿಗಳನ್ನು ಗುರುತಿಸುವ ಮೂಲಕ ಆಚರಿಸಿತು. ಸನ್ಮಾನ ಸ್ವೀಕರಿಸಿದವರಲ್ಲಿ ಧೈರ್ಯಶಾಲಿ ರ಼್ಯಾಟ್ ಮೈನರ್ಸ್ ಗಮನ ಸೆಳೆದರು. ಇತ್ತೀಚೆಗೆ ಉತ್ತರಾಖಂಡದಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವಲ್ಲಿ ತಮ್ಮ ವೀರೋಚಿತ ಪ್ರಯತ್ನಗಳಿಗಾಗಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ಸಂದರ್ಭದಲ್ಲಿ ಹಿಮಾಲಯ ಡ್ರಗ್ಸ್‌ನ ಅಧ್ಯಕ್ಷ ಡಾ.ಎಸ್.ಫಾರೂಕ್ ಅವರು ವೇದಿಕೆಯಲ್ಲಿ ರ಼್ಯಾಟ್ ಮೈನರ್ಸ್’ರನ್ನು ಅಭಿನಂದಿಸಿ ಅವರ ಧೈರ್ಯ ಮತ್ತು ನಿಸ್ವಾರ್ಥತೆಯನ್ನು ಶ್ಲಾಘಿಸಿದರು. ಅವರು ಕೇವಲ ಉತ್ತಮ ಗಣಿಗಾರರಲ್ಲ, ಆದರೆ 41 ಕಾರ್ಮಿಕರ ಜೀವಗಳನ್ನು ಉಳಿಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಅವರ ಪ್ರಮುಖ ಪಾತ್ರಕ್ಕಾಗಿ ಅವರು ನಿಜವಾಗಿಯೂ ಶ್ರೇಷ್ಠ ಗಣಿಗಾರರೆಂದು ಉಲ್ಲೇಖಿಸಿದ್ದಾರೆ.

ಸಮಾರಂಭದಲ್ಲಿ ಮಾಸೂಮ್ ಮೊರಾದಬಾದಿ ಅವರು ಸಂಪಾದಿಸಿದ “ಮೌಲಾನಾ ಮುಹಮ್ಮದ್ ಅಲಿ ಜೌಹರ್-ಅಂಖೋನ್ ದೇಖಿ” ಎಂಬ ಪುಸ್ತಕವನ್ನು ಸಹ ಅನಾವರಣಗೊಳಿಸಲಾಯಿತು. ಈ ಪುಸ್ತಕವು ಮೌಲಾನಾ ಮುಹಮ್ಮದ್ ಅಲಿ ಜೌಹರ್ ಅವರ ಜೀವನ ಮತ್ತು ಕೊಡುಗೆಗಳ ಬಗ್ಗೆ ಆಳವಾದ ಒಳನೋಟವನ್ನು ಹೊಂದಿದೆ.

Latest Indian news

Popular Stories