ಏಷಿಯಾ ಕಪ್ ಫೈನಲ್’ನಲ್ಲಿ ಅದ್ಭುತ ಸಾಧನೆ: ಈಗ ಮುಹಮ್ಮದ್ ಸಿರಾಜ್ ವಿಶ್ವದ ನಂಬರ್ 1 ಬೌಲರ್

ಕ್ರಿಕೆಟ್: ಭಾನುವಾರ ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಮೊಹಮ್ಮದ್ ಸಿರಾಜ್ ವಿಶ್ವದ ನಂ.1 ODI ಬೌಲರ್ ಆಗಿ ಮರಳಿದ್ದಾರೆ. 

ಏಷ್ಯಾಕಪ್‌ನಲ್ಲಿ 12.2ರ ಸರಾಸರಿಯಲ್ಲಿ ಹತ್ತು ವಿಕೆಟ್‌ಗಳನ್ನು ಕಬಳಿಸಿದ ನಂತರ ಸಿರಾಜ್ ರ್ಯಾಂಕಿಂಗ್‌ನ ಶಿಖರಕ್ಕೆ ಏರಿದ್ದಾರೆ. ಆ ಪ್ರದರ್ಶನದ ಪ್ರಮುಖ ಅಂಶವೆಂದರೆ 21ಕ್ಕೆ 6 ವಿಕೆಟ್ ಪಡೆದು ಶ್ರೀಲಂಕಾವನ್ನು ಫೈನಲ್‌ನಲ್ಲಿ 50 ರನ್‌ಗಳಿಗೆ ಆಲೌಟ್ ಮಾಡಿದ್ದರು.

Latest Indian news

Popular Stories