ಜೂನ್ 1ಕ್ಕೇ ಕೇರಳಕ್ಕೆ ಮುಂಗಾರು ಮಳೆ: ಐಎಂಡಿ

ಹೊಸದಿಲ್ಲಿ: ಪ್ರಸಕ್ತ ಸಾಲಿನ ಮುಂಗಾರು ಮಳೆ ಜೂ. 1ರಂದೇ ಕೇರಳ ಪ್ರವೇಶಿಸಲಿದೆ ಎಂದು ಸೋಮವಾರ ಭಾರ ತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ನೈಋತ್ಯ ಮುಂಗಾರು ಮಾರುತಗಳು ದಕ್ಷಿಣ ಅಂಡಮಾನ್‌, ಬಂಗಾಲ ಕೊಲ್ಲಿಯ ಆಗ್ನೇಯ ಭಾಗ ಹಾಗೂ ನಿಕೋಬಾರ್‌ ದ್ವೀಪಗಳನ್ನು ಮೇ 19ರಂದು ಪ್ರವೇಶಿಸಲಿವೆ.

ಈ ಹಿಂದೆ ಅಂದಾಜು ಮಾಡಿದ್ದ ಪ್ರಕಾರ ಮೇ 22ರಂದು ಅಪ್ಪಳಿಸಬೇಕಾಗಿತ್ತು. 2 ದಿನಗಳ ಮೊದಲೇ ಈ ಬೆಳವಣಿಗೆ ನಡೆಯಲಿದೆ ಎಂದು ಐಎಂಡಿ ಹೇಳಿದೆ.
ಈ ಬಾರಿ ಕೂಡ ಮುಂಗಾರು ಮಳೆ ಸಾಮಾನ್ಯಕ್ಕಿಂತ ಅಧಿಕ ವಾಗಿಯೇ ಇರಲಿದೆ ಎಂದು ಇಲಾಖೆ ಈಗಾಗಲೇ ತಿಳಿಸಿದೆ. ಮುಂಗಾರು ಕೇರಳ ಪ್ರವೇಶಿಸಿದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕ ಕರಾವಳಿಗೂ ಪ್ರವೇಶ ಪಡೆಯುವ ನಿರೀಕ್ಷೆ ಹೊಂದಲಾಗಿದೆ.

Latest Indian news

Popular Stories