
ಬೆಳಗಾವಿ:ಸಹೋದರ-ಸಹೋದರಿಯ ಮೇಲೆ ಅನೈತಿಕ ಪೊಲೀಸ್’ಗಿರಿ
ಬೆಳಗಾವಿ: ನಗರದ ಕೋಟೆ ಕೆರೆ ಆವರಣದಲ್ಲಿ ಕುಳಿತಿದ್ದ ಹುಡುಗ ಹುಡುಗಿಯನ್ನು ನೋಡಿ ಅನ್ಯ ಕೋಮಿನ ಕೆಲ ಪುಂಡರು ಶನಿವಾರ ಮೂರು ಗಂಟೆಗಳ ಕಾಲ ಹಲ್ಲೆ ಮಾಡುವ ಮೂಲಕ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದಾರೆ.
ಪೊಲೀಸರ ಮುಂದೆ ಘಟನೆ ಭಯಾನಕತೆ ಬಿಚ್ಚಿಟ್ಟ ಯುವತಿ, ಸಹೋದರಿ ಸಹೋದರ ಅಂತಾ ಗೊತ್ತಾದ ಮೇಲೂ ಯುವಕರ ಗ್ಯಾಂಗ್ ಚಿತ್ರಹಿಂಸೆ ಕೊಟ್ಟ, ಬಲವಂತವಾಗಿ ಕೋಟೆ ಕೊರೆ ಆವರಣದಲ್ಲಿರೋ ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅವಾಚ್ಯ್ ಶಬ್ದಗಳಿಂದ ನಿಂಧಿಸಿ ನಿರಂತರ 3 ಗಂಟೆಗಳ ಕಾಲ ಕೊಠಡಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿರುವ ಯುವಕರ ಗ್ಯಾಂಗ್, ಯುವತಿ ಕೆನ್ನೆಗೆ ಹೊಡೆದು, ಹೊಟ್ಟೆ ಬಾಗದಲ್ಲಿ ಒದ್ದು ಹಲ್ಲೆ ನಡೆಸಿದ್ದಾರೆ ಇಷ್ಟೆ ಅಲ್ಲದೆ ಯುವತಿ ಸಹೋದರನ ಮೈತುಂಬಾ ಬಾಸುಂಡೆ ಬರುವಂತೆ ರಾಡ್ ನಿಂದ ಥಳಿಸಿದ್ದಾರೆ.
ಹಲ್ಲೆ ಮಾಡಿದ ಆರೋಪಿಗಳು ಮಾರ್ಕೆಟ್, ಮಾಳಮಾರುತಿ ಠಾಣೆ ವ್ಯಾಪ್ತಿ ನಿವಾಸಿಗಳೇ ಎಂದು ಮಾಹಿತಿ ಲಭ್ಯವಾಗಿದೆ.
ಇನ್ನು ಯುವಕ, ಯುವತಿಯನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.




