ಕಾಪು : ಇಂದಿನ ಮಕ್ಕಳು ಆಧುನಿಕ ತಂತ್ರ ಜ್ಞಾನದ ವ್ಯವಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾಭ್ಯಾಸ ಎಲ್ಲಾ ರೀತಿಯಲ್ಲಿ ಮುಂದುವರೆದಿದ್ದರೂ, ಧಾರ್ಮಿಕ, ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಕಲಿಯುವಲ್ಲಿ ಹಿಂದುಳಿದಿದ್ದಾರೆ. ನಮ್ಮ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಬೆಳೆಯಲು ದೇವಭಯಯುಳ್ಳ ವಿದ್ಯಾಭ್ಯಾಸ ತಮ್ಮ ತಮ್ಮ ಮನೆಗಳಲ್ಲಿ ನೀಡಲು ಪೋಷಕರು ಮುಂದಾಗಬೇಕು. ಚಾರಿತ್ರ್ಯವು ಧಾರ್ಮಿಕ ವಿದ್ಯಾಭ್ಯಾಸ ಮತ್ತು ಮನೆಯ ಪೂರಕ ಅನುಸರಣೆಯಿಂದ ಬರುತ್ತದೆ ಎಂದು ಮಲ್ಪೆ ಅಬೂಬಕ್ಕರ್ ಜುಮಾ ಮಸೀದಿಯ ಇಮಾಮರಾದ ಮೌಲಾನಾ ಇಮ್ರಾನುಲ್ಲಾಹ್ ಖಾನ್ ಮನ್ಸೂರಿ ಹೇಳಿದರು.
ಅವರು ಇಂದು ಕಾಪುವಿನ ಹೋಟೆಲ್ K-1 ನಲ್ಲಿ, ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕದ ಕಾಪು ಸೆಂಟರ್ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ “ವಿದ್ಯಾಭ್ಯಾಸ ಮತ್ತು ಚಾರಿತ್ಯ ನಿರ್ಮಾಣ” ಎಂಬ ವಿಷಯದಲ್ಲಿ ಮಾತನಾಡಿದರು.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಇಂಗ್ಲಿಷ್ ಉಪನ್ಯಾಸಕ ಯಾಸೀನ್ ಮನ್ನಾ ರವರು, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಗೀಳಿನಲ್ಲಿ ಬಿದ್ದು ನರಳುತ್ತಿರುವುದು ನಿಜವಾಗಿಯೂ ಬೇಸರದ ಸಂಗತಿಯಾಗಿದೆ ಇದರಿಂದ ಹೊರತಂದು ಮಕ್ಕಳನ್ನು ಧಾರ್ಮಿಕ ಮತ್ತು ಮಾನಸಿಕವಾಗಿ ಸದೃಢ ಗೊಳಿಸುವುದು ಪೋಷಕರು ಮತ್ತು ಸಮಾಜದ ಜವಾಬ್ದಾರಿಯಾಗಿದೆ.
ಹಲೀಮ ಸಾಬ್ಜು ಆಡೊಟೋರಿಯಮ್ ಉದ್ಯಾವರ ಇದರ ಮುಖ್ಯಸ್ಥರಾದ ಅಲ್ ಹಾಜ್ ಅಬ್ದುಲ್ ಜಲೀಲ್ ಸಾಹೇಬ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾಪು ತಾಲೂಕು ಅಧ್ಯಕ್ಷರಾದ ನಸೀರ್ ಅಹಮದ್ . ಮುಸ್ತಾಖ್ ಇಬ್ರಾಹಿಮ್ , ಕೆ. ಎಂ. ಲುತ್ಫುಲ್ಲಾ, ರೇಷ್ಮಾ ಕಾರ್ಕಳ ಸಂದೋರ್ಬಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಕಾಪು ಘಟಕದ ಅಧ್ಯಕ್ಷರಾದ ಅನ್ವರ್ ಅಲಿ ಕಾಪು ವಹಿಸಿದ್ದರು. ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಕಳೆದ ಬಾರಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಹಾಗೂಕಾಪು ವರ್ತುಲದ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮವು ಮುಹಮ್ಮದ್ ರಾಯೀಫ್ ರವರ ಕುರ್ ಆನ್ ಪಠನದೊಂದಿಗೆ ಪ್ರಾರಂಭವಾಯಿತು. ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು. ನಸೀರ್ ಅಹಮದ್ ಲುತ್ಫುಲ್ಲಾ ರವರು ಧನ್ಯವಾದ ನೀಡಿದರು.