ಸಂಸದ ದಾನೀಶ್ ಅಲಿ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಕ್ಷಮೆಯಾಚಿಸಿದ ಬಿಜೆಪಿ ಸಂಸದ ರಮೇಶ್ ಬಿದರಿ

ನವದೆಹಲಿ: ಸೆ. 27 ರಂದು ಲೋಕಸಭೆಯಲ್ಲಿ ಬಿಎಸ್ಪಿ ಸಂಸದ ದಾನೀಶ್ ಅಲಿ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ರಮೇಶ್ ಬಿದರಿ ಇದೀಗ ಕ್ಷಮೆಯಾಚಿಸಿ ಸುದ್ದಿಯಲ್ಲಿದ್ದಾರೆ.

ವಿಶೇಷಾಧಿಕಾರಿಯವರ ಸಭೆಯಲ್ಲಿ ಉಭಯ ನಾಯಕರನ್ನು ಪತ್ಯೇಕವಾಗಿ ಕರೆದು ಮಾತನಾಡಿಸಲಾಗಿತ್ತು. ಸಮಿತಿಯಲ್ಲಿದ್ದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಬಿಜೆಪಿ ಸಂಸದ ರಮೇಶ್ ಬಿದಾರಿ‌ ಕ್ಷಮೆಯಾಚಿಸಿರುವ ಕುರಿತು ಮಾಹಿತಿ ನೀಡಿದ್ದಾರೆ.

ಸಮಿತಿಯು ಗುರುವಾರ‌ ಮೌಖಿಕ ಸಾಕ್ಷ್ಯ ನೀಡಲು ರಮೇಶ್ ಬಿದಾರಿ ಮತ್ತು ದಾನೀಶ್ ಅಲಿ ಅವರನ್ನು ಕರೆದು ವಿಚಾರಣೆ ನಡೆಸಿತ್ತು.

Latest Indian news

Popular Stories