ಕಾರವಾರ: ಪ್ರೀತಿಸುತದ್ದ ಹುಡಿಗಿ ಕೈಕೊಟ್ಟು ಸಿಟ್ಟಿಗೆ ಆಕೆಯ ಗಂಡನನ್ನೇ ಬಸ್ ನಲ್ಲಿ ಚಾಕು ಇರಿದು ಕೊಲೆಮಾಡಿದ ಘಟನೆ ಶಿರಸಿ ನಗರದ ಕೆ.ಎಸ್.ಆರ್.ಟಿ.ಸಿ .ಬಸ್ ನಿಲ್ದಾಣದ ಸಮೀಪ ನಡೆದಿದೆ. ಬಸ್ ಇನ್ನೂ ಶಿರಸಿ ದಾಟಿರಲಿಲ್ಲ.
ಕೊಲೆಯಾದ ಯುವಕನನ್ನು ಸಾಗರ ತಾಲೂಕಿನ ನೀಚಡಿ ಗ್ರಾಮದ ಗಂಗಾಧರ್ ಎಂದು ಗುರುತಿಸಲಾಗಿದೆ. ಕೊಲೆಯ ಆರೋಪಿ ಪ್ರೀತಮ್ ಡಿಸೋಜನನ್ನು ಪೋಲೀಸರು ಬಂಧಿಸಿದ್ದಾರೆ .
ಶಿರಸಿಯ ಪೂಜಾ ಎಂಬಾಕೆಯನ್ನು ಪ್ರೀತಮ್ ಡಿಸೋಜ ಪ್ರೀತಿಸುತಿದ್ದ .ಪೂಜಾ ಕೆಲಸಕ್ಕಾಗಿ ಬೆಂಗಳೂರಿಗೆ ಹೋದಾಗ ,ಅಲ್ಲಿ ಪರಿಚಯವಾದ ಸಾಗರದ ಯುವಕ ಗಂಗಾಧರ್ ನನ್ನು ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದಳು. ಇಂದು
ಪತ್ನಿಯ ಸಂಬಂಧಿಕರ ಮನೆಗೆ ಗಂಗಾಧರ ಬಂದಿದ್ದ. ಸಂಬಂಧಿಕರ ಮನೆಯ ಕಾರ್ಯಕ್ರಮ ಮುಗಿಸಿ ಪತ್ನಿಯೊಂದಿಗೆ ಬೆಂಗಳೂರಿಗೆ ಪ್ರಯಾಣಿಸಲು , ಶಿರಸಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿದ್ದರು. ಈ ವೇಳೆ ಪ್ರೀತಮ್ ಕೂಡ ಬಸ್ ಪ್ರವೇಶಿಸಿ , ಗಂಗಾಧರ್ ನೊಂದಿಗೆ ಜಗಳ ತೆಗೆದು, ಆತನ ಎದೆಗೆ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದ . ಘಟನೆ ಸಂಬಂಧ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಗಂಗಾಧರ್ ಪತ್ನಿ ಪೂಜಾಳನ್ನು ಪೊಲೀಸರು ವಶಕ್ಕೆ ಪಡೆದುಮಾಹಿತಿ ಕಲೆ ಹಾಕಿದರು.
ಗಂಟೆಯಲ್ಲಿ ಆರೋಪಿಯ ಬಂಧನ:
ಬಸ್ ನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ವಿಷಯ ನಗರದಲ್ಲಿ ಬಹಿರಂಗ ವಾಗುತ್ತಿದ್ದಂತೆ , ಪ್ರೀತಮ್ ಪೊಲೀಸರ ಬಳಿ ಬಂದ ಎಂದು ಹೇಳಲಾಗಿದೆ. ಆತನನ್ನು ಬಂಧಿಸಿ ತನಿಖೆ ಮಾಡಲಾಗುತ್ತಿದೆ.
….