
Featured StoryState News
ಕ್ರಮ ಕೈಗೊಳ್ಳದಿದ್ದರೆ ಪೊಲೀಸ್ ಬಟ್ಟೆ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರಾಗಿ – ನಳಿನ್ ಕುಮಾರ್ ಆಕ್ರೋಶ
ಬೆಂಗಳೂರು: ಕೆಲವು ಕಡೆಗಳಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಹಲ್ಲೆ ಪ್ರಕರಣಗಳು ವರದಿಯಾಗಿದೆ. ತಾಲಿಬಾನ್ ಸಂಸ್ಕೃತಿ ಕಂಡು ಬಂದಿದೆ. ರಾಷ್ಟ್ರ ವಿರೋಧಿ ಚಟುವಟಿಕೆ ಗಮನಿಸಿದ್ದೇವೆ. ಹತ್ಯೆ ನಡೆಸಿದವರನ್ನು, ಹಲ್ಲೆ ನಡೆಸಿದವರನ್ನು ಬಂಧಿಸಬೇಕು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮಿನಿ ಬಿಹಾರ್ ಮಾಡುವ ಪ್ರಯತ್ನ ಸಾಗಿದೆ. ಬಿಜೆಪಿ ಕಾರ್ಯಕರ್ತನ ಮನೆ ಮುಂದೆ ಪಠಾಕಿ ಬಿಡಬೇಡಿ ಎಂದು ಹೇಳಿದಾಗ ಅವರ ಹತ್ಯೆ ಮಾಡಲಾಗಿದೆ ಈ ಘಟನೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಲ್ಲರೂ ದೆಹಲಿಯಲ್ಲಿದ್ದಾರೆ. ಕಾರ್ಯಕರ್ತರು ಗೂಂಡಾಗಿರಿಯಲ್ಲಿ ತೊಡಗಿಕೊಂಡಿದ್ದಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬಟ್ಟೆ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರಾಗಿ ನಮ್ಮ ವಿರೋಧವಿಲ್ಲ ಎಂದರು. ಅಂಬೇಡ್ಕರ್ ಮೂರ್ತಿಗೆ ಬೆಂಕಿ ಹಾಕಿದ್ದಾರೆ. ಇವರು ದಲಿತ ವಿರೋಧಿ. ನೀವು ಅಂಬೇಡ್ಕರ್ ಗೌರವ ನೀಡುವುದಾದರೆ ಗ್ರಾಮಕ್ಕೆ ಬಂದು ಭೇಟಿಕೊಡಿ ಎಂದರು.




