Featured StoryUdupi

ನಕ್ಸಲ್ ಮುಖಂಡ ವಿಕ್ರಮ್ ಗೌಡ ಎನ್’ಕೌಂಟರ್ ಪ್ರಕರಣ: ಶರಣಾಗತಿಗೆ ಸೂಚಿಸಿದರು ಸ್ಪಂದಿಸಿಲ್ಲ; ಗುಂಡಿನ ಚಕಮಕಿಯಲ್ಲಿ ಮೃತ್ಯು – ಅಂತರಿಕ ಭದ್ರತಾ ವಿಭಾಗ ಡಿಜಿಪಿ ಡಿ ರೂಪ

ಉಡುಪಿ: ಹೆಬ್ರಿಯ ಕಾಡಿನಲ್ಲಿ ಆ್ಯಂಟಿ ನಕ್ಸಲ್ ಫೋರ್ಸ್ (ANF) ನ ಏನ್’ಕೌಂಟರ್’ನಲ್ಲಿ ಹತರಾದ ನಕ್ಸಲ್ ಮುಖಂಡ ವಿಕ್ರಮ್ ಗೌಡ ಪ್ರಕರಣದ ಕುರಿತು ರಾಜ್ಯ ಅಂತರಿಕ ಭದ್ರತಾ ವಿಭಾಗದ ಡಿಜಿಪಿ ಡಿ ರೂಪ ಮಾಧ್ಯಮದೊಂದಿಗೆ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

1002251250 Featured Story, Udupi

“ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂ ಗೌಡ ಮೇಲೆ ಸುಮಾರು 61 ಪ್ರಕರಣಗಳು ದಾಖಲಾಗಿತ್ತು. ಸುಲಿಗೆ, ಕೊಲೆ ಪ್ರಕರಣಗಳು ಅವರ ಮೇಲಿತ್ತು. 19 ಪ್ರಕರಣಗಳು ಕೇರಳದಲ್ಲಿ ಇತ್ತು” ಎಂದು ಐಜಿಪಿ ಡಿ ರೂಪ ಮಾಹಿತಿ ನೀಡಿದರು.

1002251256 Featured Story, Udupi

“ಕಾರ್ಯಾಚರಣೆಯನ್ನು ಅಂತರಿಕ ಭದ್ರತಾ ವಿಭಾಗದಡಿಯಲ್ಲಿ ಬರುವ ANF (ಆ್ಯಂಟಿ ನಕ್ಸಲ್ ಫೋರ್ಸ್) ನಡೆಸಿತ್ತು. ಎಸ್ಪಿ ಜೀತೇಂದ್ರ ದಯಾಮ ಇದರ ಮುಖ್ಯ ರೂವಾರಿಯಾಗಿದ್ದಾರೆ” ಎಂದು ಹೇಳಿದರು.

1002251268 Featured Story, Udupi

“ಹತ್ತು ದಿನದಿಂದ ಈ ಪ್ರದೇಶದಲ್ಲಿ ಕ್ಯೂಬಿಂಗದ ಕಾರ್ಯಾಚರಣೆ ನಡೆಸಲಾಗಿತ್ತು. ನವೆಂಬರ್ 10 ರಿಂದ ಕಾರ್ಯಾಚರಣೆ ಆರಂಭಿಸಿದ್ದೇವು. ಅಂತರಿಕ ಭದ್ರತಾ ವಿಭಾಗದ ಡಿಜಿಪಿ ಗಣಮೋಹನ್ ಅವರು ಮಾರ್ಗದರ್ಶನ ಮಾಡಿದ್ದರು. ಅದರೊಂದಿಗೆ ಜಿಲ್ಲಾ ಪೊಲೀಸರ ಸಹಕಾರವಿತ್ತು” ಎಂದು ಹೇಳಿದರು.

ʼಎಎನ್‌ಎಫ್ 2005 ಮೇ ತಿಂಗಳಿನಲ್ಲಿ ಸ್ಥಾಪನೆಗೊಂಡಿದ್ದು, ಆ ಬಳಿಕ ನಡೆದ ನಾಲ್ಕನೇ ಎನ್‌ಕೌಂಟರ್ ಇದಾಗಿದೆ. ವಿಕ್ರಂ ಗೌಡ ಜತೆಗೆ ಇನ್ನು ಐದಾರು ಮಂದಿ ಇದ್ದಾರೆ. ಅವರು ಹೇಗೆ ಮುಂದೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ನಮ್ಮ ಕೂಂಬಿಂಗ್ ಕಾರ್ಯಾಚರಣೆ ಮುಂದೆ ಕೂಡಾ ನಿರಂತರವಾಗಿ ಮುಂದುವರಿಸಯುತ್ತದೆʼ ಎಂದು ಅವರು ಹೇಳಿದರು.

ಈ ಕಾರ್ಯಾಚರಣೆಗೆ ಬೆಂಗಳೂರಿನಿಂದ 75 ಸಿಬ್ಬಂದಿಗಳು, ಶಿವಮೊಗ್ಗದಿಂದ 25 ಸಿಬ್ಬಂದಿಗಳು ಆಗಮಿಸಿದ್ದರು ಎಂದು ಹೇಳಿದರು.

ವಿಕ್ರಮ್ ಗೌಡ ಅವರಿಗೆ ಶರಣಾಗತಿಯಾಗಲೂ ಸೂಚಿಸಲಾಗಿತ್ತು. ಸ್ಪಂದಿಸದಿದ್ದಾಗ ಗುಂಡಿನ ಚಕಮಕಿಯಲ್ಲಿ ಹತರಾದರು ಎಂದು ಮಾಹಿತಿ ನೀಡಿದರು. ಅವರ ಮರಣೋತ್ತರ ಪರೀಕ್ಷೆಯನ್ನು ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button