Featured StoryUdupi

ನೇಜಾರು ಕೊಲೆ ಪ್ರಕರಣ | ನಡಿಗೆಯ ಶೈಲಿಯೇ ಆರೋಪಿಯ ಬಂಧನಕ್ಕೆ ಸಹಾಯ ಮಾಡಿತ್ತು!

ನೇಜಾರು ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ. ಇನ್ನು ಪೊಲೀಸರು ಈತನ ಕುರಿತು ಧೃಡ ಪಡಿಸಬೇಕಾಗಿರುವುದು ಮಾತ್ರ ಬಾಕಿ ಉಳಿದಿದೆ.

ಮಾಹಿತಿಯ ಪ್ರಕಾರ ಸಿಸಿ ಟಿವಿಯಲ್ಲಿ ಆತನ ಭಿನ್ನ ನಡಿಗೆಯ ಶೈಲಿಯನ್ನು ಪೊಲೀಸರು ಗಮನಿಸಿದ್ದರು. ಆತನ ಆ ನಡಿಗೆಯ ಶೈಲಿಯ ಆತನನ್ನು ಗುರುತಿಸಲು ಸಾಧ್ಯವಾಗಿದೆ.

ಬೆಳಗಾವಿಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಚೌಗಲೆ (35) ಯನ್ನು ಬಂಧಿಸಲಾಗಿದೆ.

ಆತ ಕೊಲೆ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ ಆನ್ ಮಾಡಿದಾಗ ಲೊಕೇಶನ್ ಟ್ರೆಸ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಇನ್ನು ಈ ಕೊಲೆಯ ಆಯಾಮ, ಕಾರಣದ ಕುರಿತು ಜಿಲ್ಲಾ ವರಿಷ್ಠಾಧಿಕಾರಿಗಳು ತಿಳಿಸಬೇಕಾಗಿದೆ.

ಹಲವು ಊಹಾಪೋಹಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಯಾವುದನ್ನು ಇದುವರೆಗೆ ಪೊಲೀಸರು ಧೃಡ ಪಡಿಸಿಲ್ಲ.

ಮೂವರು ಮಹಿಳೆಯರು ಮತ್ತು ಒರ್ವ ಪುಟ್ಟ ಮಗು ಇತನ ಕ್ರೌರ್ಯಕ್ಕೆ ಬಲಿಯಾಗಿದ್ದು ಇಡೀ ರಾಜ್ಯವೇ ಈ ಪ್ರಕರಣದಿಂದ ಆತಂಕಕ್ಕೆ ಒಳಗಾಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button