
ನೇಜಾರು ಕೊಲೆ ಪ್ರಕರಣ: ಆಯ್ನಾಝ್ ಹತ್ಯೆ ಮಾಡಲು ಬಂದಿದ್ದ ತಡೆಯಲು ಬಂದಾಗ ಇತರರನ್ನು ಹತ್ಯೆ ಮಾಡಿದ್ದಾನೆ – ಎಸ್ಪಿ ಉಡುಪಿ
ಉಡುಪಿ: ಈಗಾಗಲೇ ಮಲ್ಪೆ ಪೊಲೀಸ್ ವ್ಯಾಪ್ತಿಯಲ್ಲಿ ನೇಜಾರಿನ ನಾಲ್ಕು ಜನರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡ ರಚನೆ ಮಾಡಿ ಮತ್ತು ಹೆಚ್ಚುವರಿ ತಂಡ ರಚನೆ ಮಾಡಿ ವಿವರವಾಗಿ ತನಿಖೆ ಮಾಡಲಾಗಿದೆ.ಈ ಪ್ರಕ್ರಿಯೆಯಲ್ಲಿ ಹದಿನೈದು ಜನರ ವಿಚಾರಣೆ ಮಾಡಿ ಇದೀಗ ಆರೋಪಿ ಪ್ರವೀಣ್ ಚೌಗಲೆ (39) ಯನ್ನು ದಸ್ತಗಿರಿ ಮಾಡಲಾಗಿದೆ ಎಂದು ಎಸ್ಪಿ ಅರುಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯ ಜಿಲ್ಲೆಯಿಂದ ಕಸ್ಟಡಿ ಪಡೆದಿದ್ದೆವು.ಕೊಲೆ ಮಾಡಿರುವುದನ್ನು ಒಪ್ಪಿದ್ದಾನೆ. ತನಿಖಾಧಿಕಾರಿ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ. ಆಯುಧವನ್ನು ಆದಷ್ಟು ಶೀಘ್ರ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ ಎಂದಿದ್ದಾರೆ.
ಕೊಲೆಗೆ ಮೂರು ಉದ್ದೇಶ ವಿಚಾರಣೆಯಲ್ಲಿ ತಿಳಿದು ಬಂದಿದ್ದು ಮತ್ತೊಮ್ಮೆ ಸಂತ್ರಸ್ಥ ಕುಟುಂಬದೊಂದಿಗೆ ಪರಿಶೀಲಿಸಿ ತಿಳಿಸುತ್ತೇವೆ ಎಂದರು.
ಅವನು ಕೇವಲ ಒಬ್ಬರನ್ನು ಕೊಲ್ಲಲು ಹೋಗಿದ್ದ ಅವರು ತಡೆಯಲು ಬಂದಾಗ ಇತರರನ್ನು ಕೊಂದಿದ್ದಾನೆ. ಆಯ್ನಾಝ್ ಕೊಲ್ಲಲು ಹೋದಾಗ ಇತರರನ್ನು ಕೊಂದಿದ್ದಾನೆ. ಸಾಕ್ಷ್ಯಾಧಾರ ನಾಶದ ಕಾರಣ ಇತರ ಕೊಲೆ ಮಾಡಿದ್ದಾನೆ ಎಂಬುವುದು ಸಾಬೀತಾಗಿದೆ. ಕೊಲೆಗೆ ಚಾಕು ಬಳಸಿದ್ದ. ಇದೊಂದು ಪೂರ್ವನಿಯೋಜಿತವಾಗಿ ಕೃತ್ಯ ಎಂದು ಹೇಳಿದರು.




