Featured StoryUdupi

ನೇಜಾರು ಕೊಲೆ ಪ್ರಕರಣ: ” ಆರೋಪಿ ತಾನು ಬಂದಿದ್ದ ಕಾರನ್ನು ಹೆಜಮಾಡಿ ಟೋಲ್’ಗೇಟ್ ದಾಟುವ ಮುನ್ನ ಪಾರ್ಕ್ ಮಾಡಿದ್ದ ” | “ಕೃತ್ಯ ಎಸಗಿ ಬಟ್ಟೆ ಬದಲಾಯಿಸದೆ ಅದರಲ್ಲೇ ಪರಾರಿಯಾಗಿದ್ದ” | ನಂತರ ಹೋಗಿದ್ದು ಎಲ್ಲಿಗೆ ಗೊತ್ತಾ?

ಉಡುಪಿ: ಕೃತ್ಯ ಎಸಗಲು ನ.12ರಂದು
ಬೆಳಗ್ಗೆ 8ಗಂಟೆ ಸುಮಾರಿಗೆ ಆರೋಪಿ ಪ್ರವೀಣ್ ಚೌಗುಲೆ,ಮಂಗಳೂರಿನ ಮನೆಯಿಂದ ತನ್ನ ಕಾರಿನಲ್ಲಿ ಹೊರಟಿದ್ದನು. ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಿಗುವ ಏಕೈಕ ಟೋಲ್‌ಗೇಟ್‌ನಲ್ಲಿ ತನ್ನ ಕಾರು ಹಾದು ಹೋದರೆ ಸಿಸಿಟಿವಿ ಮೂಲಕ
ತನ್ನ ಜಾಡು ಪೊಲೀಸರಿಗೆ ದೊರೆಯುತ್ತದೆ ಎಂದು ಅರಿತ ಆತ ಅದನ್ನು ಹೆಜಮಾಡಿ ಟೋಲ್ ದಾಟುವ ಮುನ್ನವೇ ಪಾರ್ಕ್ ಮಾಡಿರುವ ಕುರಿತು ಮಾಹಿತಿ‌ ಲಭ್ಯವಾಗಿದೆ.

ನಂತರ ಬಸ್, ರಿಕ್ಷಾ ಬಳಸಿ ಕೃತ್ಯ ಎಸಗಿದ ಮನೆಗೆ ತಲುಪಿದ್ದ ಕೃತ್ಯ ಎಸಗಿ ಅದೇ ಬಟ್ಟೆಯಲ್ಲಿ ವಾಪಸು ಹೋಗಿದ್ಧ ಎಂಬ ಮಾಹಿತಿ ಲಭ್ಯವಾಗಿದೆ. ಬಟ್ಟೆಗೆ ಅಂಟಿಕೊಂಡಿದ್ದ ರಕ್ತದ ಕಲೆ ಅಡಗಿಸಲು ತನ್ನಲಿದ್ದ ಬ್ಯಾಗ್ ಬಳಸುತ್ತಿದ್ದ ಎಂದು ತಿಳಿದು ಬಂದಿದೆ.

ಕರಾವಳಿ ಬೈಪಾಸ್‌ನಿಂದ ಬೈಕ್ ಏರಿ ಕಿನ್ನಿಮುಲ್ಲಿಗೆ ಹೋದ ಪ್ರವೀಣ್, ಅಲ್ಲಿಂದ ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಬಸ್ ಹತ್ತಿದ್ದನು. ಬಳಿಕ ಹೆಜಮಾಡಿ ಟೋಲ್ ಗೇಟ್ ಸಮೀಪ
ನಿಲ್ಲಿಸಿದ ತನ್ನ ಕಾರಿನ ಬಳಿ ಬಸ್‌ ನಿಂದ ಇಳಿದನು. ಅಲ್ಲಿಂದ ಕಾರಿನಲ್ಲಿ ನೇರವಾಗಿ ತನ್ನ ಮನೆಗೆ ಹೋಗಿದ್ದಾನೆ.

ಕೃತ್ಯ ಎಸಗಿ ಮನೆಗೆ ಹೋದ ಆರೋಪಿ ಪ್ರವೀಣ್, ಮನೆಯಲ್ಲಿ ತನ್ನ ಎಲ್ಲ ರಕ್ತದ ಕಲೆಗಳನ್ನು ಶುಚಿ ಗೊಳಿಸಿದನು. ಸುಮಾರು 10 ನಿಮಿಷಗಳ ಕಾಲ ಮನೆಯಲ್ಲಿ ಶುಚಿಗೊಳಿಸಿ ಬಳಿಕ ಕೃತ್ಯ ಎಸಗಿದ ವೇಳೆ ಗಾಯಗೊಂಡ ಕೈ ಬೆರಳಿಗೆ ಚಿಕಿತ್ಸೆ ಪಡೆಯಲು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾನೆ.

ನಂತರ ಮನೆಯವರನ್ನು ಕರೆದುಕೊಂಡು ವಿಹಾರಕ್ಕೆ ತೆರಳಿದ್ದು, ಕೊಲೆಗೈದು 8 ಗಂಟೆ ಕಳೆದರೂ
ಆರೋಪಿ ಯಾವುದೇ ರೀತಿಯ ಪಶ್ಚಾತಾಪ
ಇಲ್ಲದೆ ಮಾಮೂಲಿಯಂತೆ ಮನೆಯವರೊಂದಿಗೆ
ಬೆರೆತುಕೊಂಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮರುದಿನ ಕಾರಿನಲ್ಲಿ ಬೆಳಗಾವಿಗೆ: ಹಬ್ಬದ ಪ್ರಯುಕ್ತ ಎರಡು ದಿನ ರಜೆ ಇದೆ ಎಂದು ಹೇಳಿ ಕೊಲೆಗೈದ ಮರು ದಿನ ಅಂದರೆ
ನ.13ರಂದು ಬೆಳಗಾವಿಯ ಕುಡುಚಿಗೆ ಕುಟುಂಬದೊಂದಿಗೆ ತೆರಳಿದ್ದಾನೆ. ಈ ಕುರಿತು ಮಂಗಳೂರಿನಲ್ಲೂ ಆರೋಪಿಯ ಮಹಜರು ನಡೆಸಲಾಯಿತು.

ಇನ್ನು ಆರೋಪಿ ಬಳಸಿದ ಆಯುಧಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button