Featured StoryDakshina Kannada

ನೇಜಾರು ಕೊಲೆ ಪ್ರಕರಣ: ಆರೋಪಿ ವಾಸವಿದ್ದ ಮಂಗಳೂರಿನ ಮನೆಯಲ್ಲಿ ಮಹಜರು – ಸಾಕ್ಷ್ಯಾಧಾರ ಪತ್ತೆಗಾಗಿ ತೀವ್ರ ಶೋಧ

ನೇಜಾರಿನ ನಾಲ್ಕು ಕೊಲೆ ಪ್ರಕರಣದ ಆರೋಪಿಯನ್ನು ಸ್ಥಳ ಪರಿಶೀಲನೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು.

ಪದವಿನಂಗಡಿಯಲ್ಲಿರುವ ಆತನ ಹಿಂದಿನ ನಿವಾಸಕ್ಕೆ ಕರೆತಂದು ಮಹಜರು ನಡೆಸಿದ್ದಾರೆ. ಪ್ರವೀಣ್ ಈ ಹಿಂದೆ ಪದವಿನಂಗಡಿಯ ಮನೆಯೊಂದರಲ್ಲಿ ಸಾಕಷ್ಟು ದಿನ ವಾಸವಾಗಿದ್ದ ಎಂದು ತಿಳಿದು ಬಂದಿದೆ.

ತಪಾಸಣೆ ವೇಳೆ ತನಿಖಾಧಿಕಾರಿ, ವಿಧಿವಿಜ್ಞಾನ ಅಧಿಕಾರಿಗಳು ಹಾಗೂ ಇತರೆ ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಆರೋಪಿಯು ಕೃತ್ಯಕ್ಕೆ ಬಳಸಿದ್ದ ಚಾಕು ಈ ಸಂದರ್ಭದಲ್ಲಿ ಪತ್ತೆಯಾಗಿದೆ. ಅಪರಾಧದ ಸಮಯದಲ್ಲಿ ಬಳಸಿದ ಶಸ್ತ್ರಾಸ್ತ್ರ ಮತ್ತು ಇತರ ವಸ್ತುಗಳನ್ನು ನವೆಂಬರ್ 17 ಮತ್ತು 18 ರಂದು ವಶಪಡಿಸಿಕೊಳ್ಳಲಾಗಿದೆ.

ಪ್ರವೀಣ್ ಚೌಗುಲೆ ಅವರು ನ.12ರಂದು ಹಾಡಹಗಲೇ ಉಡುಪಿಯ ನೇಜಾರಿನಲ್ಲಿರುವ ತಮ್ಮ ನಿವಾಸದಲ್ಲಿ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.ನಂತರ ಆತನನ್ನು ಬೆಳಗಾವಿಯ ಕುಡಚಿಯಲ್ಲಿ ಪೊಲೀಸರು ಯಶಸ್ವಿಯಾಗಿ ಬಂಧಿಸಲಾಗಿತ್ರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button