Featured StoryUdupi

ನೇಜಾರು ಕೊಲೆ ಪ್ರಕರಣ | ರಕ್ತ ಸಿಕ್ತ ಬಟ್ಟೆ ದಾರಿ ಮಧ್ಯೆದಲ್ಲೇ ಸುಟ್ಟಿದ್ದ ಆರೋಪಿ | ಶೀಘ್ರದಲ್ಲೇ ತನಿಖೆ ಪೂರ್ಣಗೊಂಡು‌ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ

ನೇಜಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದು ಮಾಹಿತಿಯ ಪ್ರಕಾರ ಕೊಲೆ ಮಾಡಿದ ನಂತರ ಬೈಕ್, ಆಟೋ ಮುಖಾಂತರ ತಾನು ನಿಲ್ಲಿಸಿದ್ದ ಕಾರಿನ ಬಳಿ ತಲುಪಿ ಕಾರಿನಲ್ಲೇ ತನ್ನ ರಕ್ತ ಸಿಕ್್ತ ಬಟ್ಟೆ ಬದಲಾಯಿಸಿದ್ದ ಆರೋಪಿ ಚೌಗಲೇ ನಂತರ ದಾರಿ ಮಧ್ಯೆಯೆಲ್ಲೋ ಬಟ್ಟೆ ಸುಟ್ಟಿದ್ದ ಎನ್ನಲಾಗಿದೆ. ಆದರೆ ಪೊಲೀಸರಿಗೆ ಅದರ ಕುರುಹು ಸಿಕ್ಕಿಲ್ಲ. ಅದಕ್ಕಾಗಿ ಪೊಲೀಸರು ಇದೀಗ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಆರೋಪಿಗೆ ಹದಿನಾಲ್ಕು ದಿನ ಪೊಲೀಸ್ ಕಸ್ಟಡಿ ನೀಡಿದ್ದು ಶೀಘ್ರದಲ್ಲಿ ತನಿಖೆ ಮುಗಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.

ತನಿಖೆ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ(39)ನನ್ನು
ಪೊಲೀಸರು ಎರಡು ದಿನಗಳೊಳಗೆ ನ್ಯಾಯಾಲಯಕ್ಕೆ
ಹಾಜರುಪಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ನಾಲ್ವರನ್ನು ಹತ್ಯೆಗೈದ ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಪೊಲೀಸರು, ಆರೋಪಿಯನ್ನು 14 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು.ಪ್ರಕರಣದ ತನಿಖಾಧಿಕಾರಿ ಮಂಜುನಾಥ್ ಗೌಡ ನೇತೃತ್ವದಲ್ಲಿ
ಆರೋಪಿಯಿಂದ ಕೃತ್ಯ ಎಸಗಿದ ಮನೆಯಲ್ಲಿ ಸ್ಥಳ ತನಿಖೆ ನಡೆಸಲಾಗಿದೆ. ಅದೇ ರೀತಿ ಆತನ ಮಂಗಳೂರಿನ ಮನೆಯಲ್ಲೂ ಈಗಾಗಲೇ ತನಿಖೆ ನಡೆಸಲಾಗಿದೆ.

ಪ್ರಕರಣದ ಮಹತ್ವದ ಸಾಕ್ಷ್ಯವಾಗಿರುವ ಕೃತ್ಯ ಎಸಗಿರುವ ಚೂರಿಯನ್ನು ನ.18ರಂದು ಆತನ ಮಂಗಳೂರು ಬಿಜೆ ಮನೆಯಿಂದಲೇ ವಶಪಡಿಸಿಕೊಂಡಿರುವುದರಿಂದ ಬಹುತೇಕ ತನಿಖೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಎಲ್ಲ ರೀತಿಯ ಸಾಕ್ಷ್ಯಗಳನ್ನು ಸಂಗ್ರಹಿಸಿ,ಪೊಲೀಸರು ಸಾಕ್ಷಿಗಳಿಂದ ಹೇಳಿಕೆಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಸಾಕ್ಷಿಗಳಿಂದ ಆರೋಪಿಯ ಗುರುತು ಪತ್ತೆ ಹಚ್ಚುವ ಕಾರ್ಯವನ್ನೂ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದೀಗ ತನಿಖೆ ಪೂರ್ಣಗೊಳ್ಳುತ್ತಿರುವುದರಿಂದ
ಆರೋಪಿಯನ್ನು 14 ದಿನಗಳ ಕಸ್ಟಡಿಯಲ್ಲಿ
ಇಟ್ಟುಕೊಳ್ಳುವುದು ಅನಗತ್ಯ ಎಂಬುದು ಮನಗಂಡಿರುವ ಪೊಲೀಸರು, ಆತನನ್ನು ಮುಂದಿನ ಎರಡು ದಿನಗಳ ಒಳಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಯನ್ನೂ ಪೊಲೀಸರು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button