ನೇಜಾರು ಕೊಲೆ ಪ್ರಕರಣ| ಪ್ರಚೋದನಕಾರಿ ಪೋಸ್ಟ್ – ಪ್ರಕರಣ ದಾಖಲು

ನೇಜಾರು ಕೊಲೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಪೋಸ್ಟದ ಹಾಕಿದ ಆರೋಪಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.

ಸೋಶಿಯಲ್ ಮೀಡಿಯಾ ತಾಣವಾದ ಫೇಸ್ಬುಕ್ ಖಾತೆ ಪರಿಶೀಲಿಸುತ್ತಿರುವ ಸಂದರ್ಭದಲ್ಲಿ HAFEEZ MUHAMMAD ಎಂಬಾತನು ತನ್ನ ಫೇಸ್ಬುಕ್ ಖಾತೆಯಲ್ಲಿ (URL:https://www.facebook.com/profile.php?id=100094486899835&mibextid=ZbWKwL)ಇತ್ತೀಚಿಗೆ ಮಲ್ಪೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದ ನಾಲ್ಕು ಕೊಲೆಗಳ ಆರೋಪಿಯ ಬಗ್ಗೆ “ಪ್ರಿಪ್ರೇಶನ್ ಇಲ್ಲದೆ ಪ್ರವೀಣ್ ಚೌಗಲೆಯನ್ನು ಕೊಲ್ಲುವ ಒಂದು ಸುಲಭದ ದಾರಿಯನ್ನು ನೇಜಾರಿನವರು ಕಳೆದುಕೊಂಡರು “ ಎಂಬ ಪೋಸ್ಟ್ ನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹರಿಬಿಟ್ಟ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ
115, 505(2) IPC ಅಡಿಯಲ್ಲಿ ಪ್ರಕರಣ ದಾಖಲಾಗಿದೆ‌.

Latest Indian news

Popular Stories