ಎಂಎಸ್‌ಎಂಇ ಯೋಜನೆ ದೇಶದ ಬೆನ್ನೆಲುಬು: ಸಚಿವೆ ನಿರ್ಮಲಾ ಸೀತಾರಾಮನ್

ಮಣಿಪಾಲ: ಎಂಎಸ್‌ಎಂಇ ಬಗ್ಗೆ ಕೇಂದ್ರ ಸರಕಾರ ವಿಶೇಷ ಮುತುವರ್ಜಿ ವಹಿಸಿದೆ. ಬಡ ಮತ್ತು ಮಧ್ಯಮ ವರ್ಗಕ್ಕೆ ಈ ಯೋಜನೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಆರಂಭಿಸಲಾದ ಉದ್ಯಂ ಪೋರ್ಟಲ್ ಗೆ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮಣಿಪಾಲದ ಖಾಸಗಿ ಹೋಟೆಲ್ನಲ್ಲಿ ಇಂದು ಆಯೋಜಿಸಿದ ಪ್ರಬುಧ್ಧರ ಸಭೆಯಲ್ಲಿ ಅವರು ಮಾತನಾಡುತಿದ್ದರು. ಎಂಎಸ್ಎಮ್ಇ ಮೂಲಕ ತಯಾರಾದ ವಸ್ತುಗಳ ರಫಿತಿಗೆ ಆದ್ಯತೆ ನೀಡಿದ್ದೇವೆ. ಎಂಎಸ್ಎಂಇ ಮೂಲಕ 16 ಪೇಟೆಂಟ್ ನೀಡಲಾಗಿದೆ. ಪ್ರತಿ ಬಾರಿ ಪ್ರಧಾನಿ ಮೋದಿಯವರು ಎಂಎಸ್ಎಂಇ ಬಗ್ಗೆ ಒತ್ತು ಕೊಟ್ಟು ಮಾತನಾಡುತಾತಿರೆ. ಎಂಎಸ್ಎಂಇ ಭಾರತ ದೇಶದ ಬೆನ್ನೆಲುಬು. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.

ಸಣ್ಣ ವ್ಯಾಪಾರಕ್ಕೆ ಭದ್ರತೆ ನೀಡಲು ಸರ್ಕಾರ ಬದ್ಧವಾಗಿದೆ. ಆದಾಯ ತೆರಿಗೆ ವಿಚಾರದಲ್ಲಿ ಅನೇಕ ಸುಧಾರಣೆ ತಂದಿದ್ದೇವೆ. 7ಲಕ್ಷದವರೆಗೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ಮಿತಿಯನ್ನು 7.27ಲಕ್ಷ ರೂ. ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗಕ್ಕೆ ತುಂಬಾ ಅನುಕೂಲವಾಗಲಿದೆ. ಜೀವ ಉಳಿಸುವ ಔಷಧಗಳು ಮತ್ತು ಕ್ಯಾನ್ಸರ್ ಮೆಡಿಸಿನ್ಗಳಿಗೂ ವಿನಾಯಿತಿಯ ಲಾಭ ದೊರಕಲಿದೆ ಎಂದು ಹೇಳಿದರು.

ಸಭೆಯಲ್ಲಿ ಲೆಕ್ಕಪರಿಶೋಧಕರು,ಆರ್ಥಿಕ ತಜ್ಞರು,ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.ಉಪನ್ಯಾಸ ಮತುತಿ ಆರ್ಥಿಕ ತಜ್ಞರ ಜೊತೆ ನಿರ್ಮಲಾ ಸೀತಾರಾಮನ್ ಸಂವಾದ ನಡೆಸಿದರು

Latest Indian news

Popular Stories