ಎಕ್ಸ್‌ನಲ್ಲಿ ಅಶ್ಲೀಲ, ಹಿಂಸೆ ಅಂಶಗಳಿಗೆ ಅನುಮತಿ | ಕಂಟೆಂಟ್‌ ನೀತಿಯಲ್ಲಿ ಬದಲಾವಣೆ ತಂದ ಮಸ್ಕ್

ಸ್ಯಾನ್‌ಫ್ರಾನ್ಸಿಸ್ಕೋ: ಮೈಕ್ರೋಬ್ಲಾಗಿಂಗ್‌ ಜಾಲತಾಣ ಎಕ್ಸ್‌ನಲ್ಲಿ ಅಶ್ಲೀಲ, ಕಾಮ ಪ್ರಚೋದಕ ಮತ್ತು ಹಿಂಸಾತ್ಮಕ ದೃಶ್ಯಗಳಿರುವ ಅಂಶಗಳು ಇನ್ನು ಲಭ್ಯವಾಗಲಿವೆ. ತನ್ನ ಕಂಟೆಂಟ್‌(ವಿಷಯ) ನೀತಿಯಲ್ಲಿ ಬದಲಾವಣೆ ತಂದಿರುವ ಎಲಾನ್‌ ಮಸ್ಕ್ ನೇತೃತ್ವದ ಎಕ್ಸ್‌ ಸಂಸ್ಥೆ, ಅಶ್ಲೀಲ ವಿಚಾರ, ವೀಡಿಯೋಗಳ ಅಪ್‌ಲೋಡ್‌ಗೆ ಅನುಮತಿ ನೀಡಿದೆ.

ಕೃತಕ ಬುದ್ಧಿಮತ್ತೆ (ಎ.ಐ.) ಆಧಾರಿತ ಫೋಟೋ, ಇತರ ಕಾಮ ಸದೃಶ ಅಂಶಗಳಿಗೂ ಈ ನಿಯಮ ಅನ್ವಯವಾಗಲಿದೆ. ಹಾಗೆಂದ ಮಾತ್ರಕ್ಕೆ ಪೂರ್ಣ ಪ್ರಮಾಣದಲ್ಲಿ ಅಶ್ಲೀಲ, ಕಾಮ ಪ್ರಚೋದಕ ಕಂಟೆಂಟ್‌ಗಳನ್ನು ಅಪ್‌ಲೋಡ್‌ ಮಾಡುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಇನ್ನು ಹಿಂಸಾತ್ಮಕ ಎಂಬುದಕ್ಕೆ ಸ್ಪಷ್ಟನೆಯಲ್ಲಿ “ಹಿಂಸಾತ್ಮಕ ಅಂಶಗಳಿರುವ ಭಾಷಣ ಮತ್ತು ಹಿಂಸೆಯ ವಿರುದ್ಧ ಹೋರಾಟ ನಡೆಸುವ ಅಂಶಗಳೂ’ ಅದರಲ್ಲಿ ಇರಲಿವೆ ಎಂದು ಹೇಳಿಕೊಳ್ಳಲಾಗಿದೆ.

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಜನ್ಮ ದಿನಾಂಕ ನೀಡಿ ವಯಸ್ಸು ದೃಢೀಕರಿಸಿದವರಿಗೆ ಮಾತ್ರ ಅಶ್ಲೀಲ, ಕಾಮ ಪ್ರಚೋದಕ ಮತ್ತು ಹಿಂಸೆಯ ಅಂಶಗಳು ಲಭ್ಯವಾಗಲಿವೆ.

Latest Indian news

Popular Stories