ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ: ಕ್ಷೇತ್ರವಾರು ವಿವರಕ್ಕಾಗಿ ಇಲ್ಲಿ ನೋಡಿ

ಬೆಂಗಳೂರು: ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಮತದಾನ ನಡೆಯಲಿದ್ದು, ೨ ಮತ್ತು ಮೂರನೇ ಹಂತದಲ್ಲಿ ಮತದಾನ ದಿನಾಂಕ ಪ್ರಕಟಿಸಲಾಗಿದೆ.ತಲಾ 14 ಕ್ಷೇತ್ರಗಳಲ್ಲಿ 2 ಹಂತದಲ್ಲಿ ಅಂದರೆ ಎರಡು ಮತ್ತು ಮೂರನೇ ಹಂತದ ಅವಧಿಯಲ್ಲಿ ಮತದಾನ ನಡೆಯಲಿದೆ.

ರಾಜ್ಯದ ಮೊದಲ ಹಂತ
ಮತದಾನ ದಿನಾಂಕ ಏಪ್ರಿಲ್ 26
ಕ್ಷೇತ್ರಗಳು
ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮೈಸೂರು-ಕೊಡಗು, ಚಾಮರಾಜ ನಗರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ

ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಪ್ರಕಟ 28
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏ 04
ನಾಮಪತ್ರಗಳ ಪರಿಶೀಲನೆ ದಿನಾಂಕ ಏ 05
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏ 08

ಎರಡನೇ ಹಂತ
ಮತದಾನ ದಿನಾಂಕ ಮೇ 7
ಕ್ಷೇತ್ರಗಳು
ಬೆಳಗಾವಿ, ಬೀದರ್, ಕಲಬುರಗಿ, ಚಿಕ್ಕೋಡಿ, ಉತ್ತರಕನ್ನಡ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಬಳ್ಳಾರಿ, ಹಾವೇರಿ, ಧಾರವಾಡ,ಶಿವಮೊಗ್ಗ, ದಾವಣಗೆರೆ
ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಪ್ರಕಟ ಏ 12
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏ19
ನಾಮಪತ್ರಗಳ ಪರಿಶೀಲನೆ ದಿನಾಂಕ ಏ 20
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏ 22
ಫಲಿತಾಂಶ ಜೂನ್ 04 ರಂದು ಪ್ರಕಟವಾಗಲಿದೆ.

Latest Indian news

Popular Stories