15 ವರ್ಷದಲ್ಲಿ ಬಿಜೆಪಿ ಮೀನುಗಾರರಿಗೆ ಯಾವೊಂದು ಸೌಲಭ್ಯವನ್ನೂ ನೀಡಿಲ್ಲ – ಪ್ರಸಾದ್ ಕಾಂಚನ್

“ ಮೀನುಗಾರರ ಕಷ್ಚವನ್ನು ಕಣ್ಣಾರೆ ಕಂಡಿದ್ದೇನೆ. ಮೀನುಗಾರಿಕೆಗೆ ಸೀಮೆ ಎಣ್ಣೆ ಕೊಡದ ಸರಕಾರ ಬಿಜೆಪಿ. ಡೀಸೆಲ್ ಸಬ್ಸಿಡಿ ಕೊಟ್ಟದ್ದು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ರಸ್ತೆ ಕಾಮಗಾರಿಯಾಗಿಲ್ಲ. ೧೫ ವರ್ಷದಲ್ಲಿ ಬಿಜೆಪಿ ಮೀನುಗಾರರಿಗೆ ಯಾವೊಂದು ಸೌಲಭ್ಯವನ್ನೂ ನೀಡಿಲ್ಲ. ಮಲ್ಪೆ ಡ್ರಜ್ಜಿಂಗ್ ಆಗದೆ ಹಲವು ವರ್ಷಗಳೇ ಆಗಿವೆ. “ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.


ಅವರು ಇಂದು ಮಲ್ಪೆ ಮೊಗವೀರ ಭವನದಲ್ಲಿ ಹಮ್ಮಿಕೊಂಡಿದ್ದ ಮಲ್ಪೆ ಸೆಂಟ್ರಲ್ ಮತ್ತು ಕಲ್ಮಾಡಿ ವಾರ್ಡ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

“ನಾನು ಬಾಲ್ಯ ಕಳೆದ ಸ್ಥಳ. ಮಲ್ಪೆಯಲ್ಲಿ ಕಾಂಗ್ರೆಸ್ ಕಳೆಗುಂದಿಲ್ಲ. ಒಗ್ಗಟ್ಟಾಗಿ ಕಾಂಗ್ರೆಸ್ ಕಟ್ಟಿದ ಸ್ಥಳ ಮಲ್ಪೆ. “ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.


ರಾಜ್ಯ ಸಂವಹನ ವಿಭಾಗದ ಮುಖ್ಯಸ್ಥ ಅಮೃತ್ ಶೆಣೈ , ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಅಮೃತ್ ಶೆಣೈ, ವಿಲಿಯಂ ಮಾರ್ಟಿಸ್, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ
ಕಾರ್ಯದರ್ಶಿ ಯತೀಶ್ ಕರ್ಕೇರ, ಸಾಮಾಜಿಕ ಜಾಲತಾಣದ ಅಧ್ಯಕ್ಷ ರೋಶನ್ ಶೆಟ್ಟಿ, ಹಿರಿಯ ಕಾಂಗ್ರೆಸ್ ಮುಖಂಡ ಮಹಾಬಲ ಕುಂದರ್, ಸದಾಶಿವ ಕರ್ಕೇರ, ಮೀನುಗಾರ ಮುಖಂಡ ಕೇಶವ ಎಂ . ಕೋಟ್ಯಾನ್, ನಗರ ಸಭೆ ಮಾಜಿ ಅಧ್ಯಕ್ಷೆ ಆನಂದಿ, ಜಿಲ್ಲಾ ಮೀನುಗಾರರ ಸಂಘದ ಅಧ್ಯಕ್ಷ ಮುಂಜುನಾಥ್ ಸೋಣೇಗಾರ್, ಜಿಲ್ಲಾ ಮೀನುಗಾರರ ಸಮಿತಿ ಅಧ್ಯಕ್ಷ ವಿಶ್ವಾಸ್ ಅಮೀನ್, ಸಭೆಯ ಉಸ್ತುವಾರಿ ಪ್ರವೀಣ್ ಜಿ. ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

Latest Indian news

Popular Stories