ಮಹಿಷ ದಸರಾಗೆ ಸರ್ಕಾರ ಅನುಮತಿ ಕೊಟ್ಟರೂ,ನಾವು ಬಿಡೋದಿಲ್ಲ. – ಸಂಸದ ಪ್ರತಾಪ್ ಸಿಂಹ

ಮೈಸೂರು,ಸೆ.9: ”ಬಹುಜನರ ಆಶಯಕ್ಕೆ ವಿರುದ್ಧವಾಗಿ
ಆಚರಣೆ ಮಾಡುವ ಮಹಿಷ ದಸರಾಗೆ ಸರ್ಕಾರ ಅನುಮತಿ ಕೊಟ್ಟರೂ,ನಾವು ಬಿಡುವುದಿಲ್ಲ. ಹೇಗೆ ಮಾಡುತ್ತಾರೋ ನಾವು ನೋಡುತ್ತೇವೆ” ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಎಸೆದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅನಾಚಾರ, ಅಪದ್ಧ ಅಸಹ್ಯ ಮಾಡಿದರೆ ನೋಡಿಕೊಂಡು ಸುಮ್ಮನೆ ಕೂರಲು ಅಗುವುದಿಲ್ಲ, ಮಹಿಷ ದಸರಾ ಆಚರಣೆಯನ್ನು 2019ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರಕಾರದಲ್ಲಿ ವಿ.ಸೋಮಣ್ಣ ಅವರ ಸಮ್ಮುಖದಲ್ಲೇ ನಿಲ್ಲಿಸಲಾಗಿದೆ.ಮತ್ತೆ ಯಾವಸರಕಾರ ಬಂದರೂ ಆಚರಣೆ ಮಾಡುವಂತಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

“ಏನೇ ಕಷ್ಟ ಬಂದರೂ ಲಕ್ಷಾಂತರ ಮಂದಿ ಚಾಮುಂಡಿ ತಾಯಿಯ ಬಳಿ ಹೋಗುತ್ತಾರೆ. ಅಂತದರಲ್ಲಿ ತಾಯಿಯನ್ನು ತುಚ್ಚವಾಗಿ ಮಾತನಾಡುವವರಿಗೆ ಹೇಗೆ ಅವಕಾಶ ನೀಡ್ತಾರೆ? ಮೈಸೂರಿಗರು ಈ ವಿಚಾರದಲ್ಲಿ ಒಟ್ಟಾಗಬೇಕು. ನಿಮಗೆ ಏನೇ ಕಷ್ಟ ಬಂದರು ತಾಯಿ ಬಳಿ ಬೇಡಿಕೊಳ್ಳುತ್ತಿರಿ, ಅಂತಹ ತಾಯಿಗೆ ಅವಮಾನವಾಗುವಾಗ ನೀವೆಲ್ಲ ಒಟ್ಟಿಗೆ ಹೋರಾಡಬೇಕು. ಈಗ ಮಹಿಷ ದಸರಾ ಮಾಡುವ ನಾಲ್ಕು ಜನರ ಮನೆಯಲ್ಲಿ ಹೋಗಿ ನೋಡಿ ಅವರ ಹೆಂಡತಿಯರು ಚಾಮುಂಡಿ ತಾಯಿಯನ್ನ ಆರಾಧನೆ ಮಾಡುತ್ತಾರೆ. ಇವರಿಗೆ ಕನಿಷ್ಠ ಅವರ ಮನೆಯವರ ಭಾವನೆಗಳನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಆದರೆ ಇಲ್ಲಿ ಬಂದು
ಉದ್ದುದ್ದ ಮಾತನಾಡುತ್ತಾರೆ” ಎಂದು ಹೇಳಿದರು.

Latest Indian news

Popular Stories